

ತುಮಕೂರು: ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ವಾಪಸಾಗಿರುವ ಬಗ್ಗೆ ಸಂಸದ ಜಿ.ಎಸ್.ಬಸವರಾಜು ಪ್ರತಿಕ್ರಿಯಿಸಿದ್ದಾರೆ, ನಾನು ಈ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಲೇ ಸುದ್ದಿಗಾರರ ಜತೆ ಮಾತನಾಡಿದ್ದಾರೆ.
ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ವಾಪಸಾದ ಬಗ್ಗೆ ನಾನು ಕಾಮೆಂಟ್ ಮಾಡೊಲ್ಲ 2014ರಲ್ಲಿ ನನ್ನ ವಿರುದ್ಧವೇ ಗೆದ್ದು ಸಂಸದರಾಗಿದ್ದವರು, ಮತ್ತೊಮ್ಮೆ ಗೆಲ್ಲಲು ಹೋಗಿರಬಹುದು ಎಂದಿದ್ದಾರೆ.
ಸಂಸದರಾಗಿ, ಶಾಸಕರಾಗಿದ್ದ ಆತ ಒಳ್ಳೆಯ ಮನುಷ್ಯ ಆದರೆ, ಆಸೆ ಬುರುಕ, ನೀತಿ ನಿಯಮಗಳಿಲ್ಲ. ನಮ್ಮ ಪಕ್ಷ ಗೊಡ್ಡಲ್ಲ, 10 ಜನರು ಆಕಾಂಕ್ಷಿಗಳಿದ್ದಾರೆ. ಸಮರ್ಥರನ್ನೇ ಕಣಕ್ಕಿಳಿಸುತ್ತೇವೆ ಎಂದು ಹೇಳಿದ್ದಾರೆ.