ಬರಿಗೈಯಲ್ಲಿ ನಾಗರಹಾವು ಹಿಡಿದು ಹೊರಗೆಸೆದ ಅಜ್ಜಿ

HAAVU
Published on

ತುಮಕೂರು: ತೋಟದ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು ಕಂಡು ಅಲ್ಲಿದ್ದವರೆಲ್ಲಾ ಹೊರಗೆ ಓಡಿದರೆ ವೃದ್ಧೆಯೊಬ್ಬರು ಹಾವನ್ನು ಕೈಲ್ಲಿಡಿದು ತೆಂಗಿನ ಮರಕ್ಕೆ ಅಪ್ಪಳಿಸಿ ಕೊಂದಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚಿಕ್ಕನಾಯಕನಹಳ್ಳಿ ತಾಲೂಕು ಬೆಳಗುಲಿ ಶ್ರೀರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ತೋಟದ ಮನೆಯಲ್ಲಿ ಭಾನುವಾರ ಹಾವು ಕಾಣಿಸಿಕೊಂಡಿದ್ದು ವೃದ್ಧೆ ಬರಿಕೈಯಲ್ಲಿಯೇ ಹಾವು ಹಿಡಿದು ಸಾಯಿಸಿದ್ದಾರೆ. ಹಾವು ಕಂಡು ಅಲ್ಲಿದ್ದವರು ದೊಣ್ಣೆಗಾಗಿ ಹುಡುಕಾಡುವಾಗ ವೃದ್ಧೆ ತೋರಿದ ಧೈರ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡಿದ ಬೆನ್ನಹಿಂದೆಯೇ ಸಾಕಷ್ಟು ಜನರು ಪ್ರಶ್ನಿಸಲಾರಂಭಿಸಿದ್ದರಿಂದ ಹಾಗೂ ಹಾವು ಕೊಂದಿರುವ ಬಗ್ಗೆ ಹೆದರಿಸಿರುವ ಹಿನ್ನೆಲೆಯಲ್ಲಿ ವೃದ್ಧೆ ಭಯಗೊಂಡಿದ್ದು ಆಕೆಯ ವಿಳಾಸ, ಹೆಸರನ್ನು ತಿಳಿಸಲು ಹಿಂಜರಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net