ಮಲ್ಲಸಂದ್ರ ಗ್ರಾಪಂ ಗ್ರಂಥಾಲಯದಲ್ಲಿ ಡಿಜಿಟಲ್ ಸಾಕ್ಷರತಾ ತರಬೇತಿ

MALLASANDRA_GP_Web
Published on

ತುಮಕೂರು: ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಗ್ರಾಮೀಣ ಭಾಗದಲ್ಲಿರುವ ಸ್ವಸಹಾಯ ಗುಂಪಿನ ಮಹಿಳೆಯರು, ಮಹಿಳಾ ಒಕ್ಕೂಟ ಸದಸ್ಯರು ಡಿಜಿಟಲ್ ಕೌಶಲ ಹೊಂದುವುದು ಅವಶ್ಯವಾಗಿದೆ ಎಂದು ತುಮಕೂರು ಶಿಕ್ಷಣ ಫೌಂಡೇಷನ್ ಜಿಲ್ಲಾ ಸಂಯೋಜಕ ಪ್ರದೀಪ್ ತಿಳಿಸಿದರು.

ಮಲ್ಲಸಂದ್ರ ಗ್ರಾಪಂ ಗ್ರಂಥಾಲಯದ ಅರಿವು ಕೇಂದ್ರದಲ್ಲಿ ಮಲ್ಲಸಂದ್ರ ಗ್ರಾಪಂ, ಶಿಕ್ಷಣ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಸಹಾಯ ಗುಂಪು ಮಹಿಳೆಯರಿಗೆ ಡಿಜಿಟಲ್ ಸಾಕ್ಷರತಾ ತರಬೇತಿ ಕಾಠ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಸಹಾಯ ಗುಂಪು ಮಹಿಳೆಯರು ಹಾಗೂ ಮಹಿಳಾ ಒಕ್ಕೂಟದಲ್ಲಿರುವ ಸದಸ್ಯರು ತಮ್ಮ ಜೀವನವನ್ನು ಆರ್ಥಿಕವಾಗಿ ಸುಧಾರಣೆ ಮಾಡಿ ಕೊಳ್ಳಲು ಕೈಗೊಳ್ಳುವ ಆಸಕ್ತಿದಾಯಕ ಚಟುವಟಿಕೆ ಗಳಿಗೆ ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದೆ. ಆರ್ಥಿಕವಾಗಿ ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಲು ಮಲ್ಲಸಂದ್ರ ಗ್ರಾಪಂ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತಾ ತರಬೇತಿ ಶಿಬಿರ ನಡೆಸಲಾಯಿತು.

ತುಮಕೂರು ತಾಲೂಕು ಸಂಘದ ಒಕ್ಕೂಟ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಇಂಥ ತರಬೇತಿಗಳು ಒಕ್ಕೂಟ ಮಹಿಳೆಯರಿಗೆ ತುಂಬಾ ಉಪಯೋಗಕರವಾಗಿವೆ. ತಂತ್ರಜ್ಞಾನದ ಅರಿವು ಹೊಂದುವುದರಿಂದ ಜೀವನ ಬದಲಾವಣೆಗೆ ಸಹಕಾರಿಯಾಗಲಿದೆ. ಇಂಥ ಅವಕಾಶಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಮೊಬೈನಲ್ಲಿ ಆರ್ಥಿಕ ವಹಿವಾಟು, ಒಟಿಪಿ ಬಳಕೆ, ಫೋನ್ ನಂಬರ್ ಸೇವ್ ಮಾಡುವುದು, ಕ್ಯಾಮೆರಾ ,ವಾಟ್ಸಾಪ್, ಎಸ್‌ಎಂಎಸ್ ಇತ್ಯಾದಿ ಬಳಕೆಯ ಬಗ್ಗೆ ಅರಿವು ಮೂಡಿಸಲಾಯಿತು.

ಗ್ರಾಪಂ ಪಿಡಿಒ ವಿನಾಯಕ್ , ಮಲ್ಲಸಂದ್ರ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net