

ತುಮಕೂರು: ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ವಿವಿಧ ಕಾರಣದಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು ನ.23ರಂದು ಮತದಾನ ನಡೆಯಲಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ದೊಡ್ಡ ಎಣ್ಣೆಗೆರೆ, ಚೌಳಕಟ್ಟೆ, ತಿಪಟೂರು ತಾಲೂಕಿನ ಹುಚ್ಚಗೊಂಡನಹಳ್ಳಿ, ಮಸವನಟ್ಟ, ತುರುವೇಕೆರೆ ತಾಲೂಕು ಅನೇಕೆರೆ ಮೂರು ಸ್ಥಾನ, ಕೊಂಡಜ್ಜಿ, ಶೆಟ್ಟಿಗೊಂಡನಹಳ್ಳಿ, ಕುಣಿಗಲ್ ತಾಲೂಕಿನ ಉಜ್ಜನಿ, ಅಮೃತೂರು, ತುಮಕೂರು ತಾಲೂಕು ಸ್ವಾಂದೇನಹಳ್ಳಿ, ಹಿರೇಹಳ್ಳಿ ಎರಡು ಸ್ಥಾನ, ಮಧುಗಿರಿ ತಾಲೂಕು ಕೊಡಿಗೇನಹಳ್ಳಿ, ರಂಗಾಪುರದಲ್ಲಿ ಉಪಚುನಾವಣೆ ನಡೆಯಲಿದೆ.
ಗುಬ್ಬಿ ತಾಲೂಕು ಎಂ.ಎನ್.ಕೋಟೆ, ಎಸ್.ಕೊಡಿಗೆಹಳ್ಳಿ, ಪೆದ್ದನಹಳ್ಳಿ, ಶಿವಪುರ, ಅಡಗೂರು, ಜಿ.ಹೊಸಹಳ್ಳಿ, ಶಿರಾ ತಾಲೂಕು ಲಕ್ಷಿ$್ಮಸಾಗರ, ದೊಡ್ಡಅಗ್ರಹಾರ, ಪಾವಗಡ ತಾಲೂಕು ತಿರುಮಣಿ, ಬ್ಯಾಡನೂರು, ಕಾಮನದುರ್ಗ, ವದನಕಲ್ಲು, ರಂಗಸಮುದ್ರ, ಕೊಡಮಡಗು ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣೆ ನಡೆಯಲಿದೆ.
ನ.6ರಂದು ಉಪಚುನಾವಣೆಗೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದು ನಾಮಪತ್ರ ಸಲ್ಲಿಸಲು ನ.12 ಕೊನೆಯ ದಿನ. ನ.13 ನಾಮಪತ್ರ ಪರಿಶೀಲನೆ, ನ.15 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ, ನ.23 ಮತದಾನ ನಡೆಯಲಿದೆ. ಅಗತ್ಯವಿದ್ದರೆ ನ.26 ಮರುಮತದಾನಕ್ಕೆ ಮೀಸಲಿಡಲಾಗಿದ್ದು ನ.26ರಂದು ಬೆಳಗ್ಗೆ 8ಕ್ಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.