

ತುಮಕೂರು: ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.
ನವೆಂಬರ್ 6ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನ.12 ಕಡೆಯ ದಿನವಾಗಿದೆ. ನವೆಂಬರ್ 13ರಂದು ನಾಮಪತ್ರಗಳ ಪರಿಶೀಲನೆ, ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳಲು ನ.15ರ ವರೆಗೂ ಅವಕಾಶವಿದೆ. ನ.23ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.
ನವೆಂಬರ್ 26ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಜಿಲ್ಲೆಯ 9 ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳ 30 ಸದಸ್ಯ ಸ್ಥಾನಕ್ಕೆ ನವೆಂಬರ್ 23ರಂದು ಚುನಾವಣೆ ನಡೆಯಲಿದೆ.
ಚಿಕ್ಕನಾಯಕಹಳ್ಳಿ ತಾಲೂಕು ದೊಡ್ಡ ಎಣ್ಣೇಗೆರೆ ಹಾಗೂ ಚೌಳಕಟ್ಟೆ, ತಿಪಟೂರು ತಾಲೂಕು ಹುಚ್ಚಗೊಂಡನಹಳ್ಳಿ ಹಾಗೂ ಮಸವನಘಟ್ಟ, ತುರುವೇಕೆರೆ ತಾಲೂಕು ಆನೆಕೆರೆ(3 ಸದಸ್ಯ ಸ್ಥಾನ), ಕೊಂಡಜ್ಜಿ, ಶೆಟ್ಟಿಗೊಂಡನಹಳ್ಳಿ, ಕುಣಿಗಲ್ ತಾಲೂಕು ಉಜ್ಜನಿ ಹಾಗೂ ಅಮೃತೂರು, ತುಮಕೂರು ತಾಲೂಕು ಸ್ವಾಂದೇನಹಳ್ಳಿ ಹಾಗೂ ಹಿರೇಹಳ್ಳಿ(2 ಸದಸ್ಯ ಸ್ಥಾನ), ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹಾಗೂ ರಂಗಾಪುರ, ಗುಬ್ಬಿ ತಾಲೂಕು ಮೂಗನಾಯಕನಕೋಟೆ, ಎಸ್.ಕೊಡಗೀಹಳ್ಳಿ, ಪೆದ್ದನಹಳ್ಳಿ, ಶಿವಪುರ, ಅಡಗೂರು ಹಾಗೂ ಜಿ.ಹೊಸಹಳ್ಳಿ, ಶಿರಾ ತಾಲೂಕು ಲಕ್ಷಿ$್ಮಸಾಗರ ಹಾಗೂ ದೊಡ್ಡ ಅಗ್ರಹಾರ, ಪಾವಗಡ ತಾಲೂಕು ತಿರುಮಣಿ, ಬ್ಯಾಡನೂರು, ಕಾಮನದುರ್ಗ(ನೀಲಮ್ಮನಹಳ್ಳಿ), ವದನಕಲ್ಲು, ರಂಗಸಮುದ್ರ ಹಾಗೂ ಕೊಡಮಡಗು ಗ್ರಾಮ ಪಂಚಾಯತಿಗಳಲ್ಲಿ ನವೆಂಬರ್ 23ರಂದು ಚುನಾವಣೆ ನಡೆಯಲಿದೆ.