

ತುರುವೇಕೆರೆ:ತಾಲೂಕಿನ ಗೋಣಿ ತುಮಕೂರು ಗ್ರಾಮದೇವತೆ ಶ್ರೀಗದ್ದೆ ಕೆಂಪಮ್ಮದೇವಿ ಮತ್ತು ಶ್ರೀಆದಿಶಕ್ತಿ ಅರಸಮ್ಮದೇವಿಯ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ವೈಭವಯುತವಾಗಿ ಶುಕ್ರವಾರ ರಾತ್ರಿ ನಡೆಯಿತು.
.
ಗ್ರಾಮದಲ್ಲಿ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ದೇವರಿಗೆ ತಂಬಿಟ್ಟಿನ ಆರತಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಊರಿನ ಮಧ್ಯೆಭಾಗದಲ್ಲಿರುವ ದೇವರ ಗರ್ಭ ಗುಡಿಯಿಂದ ಕಳಸ ಮತ್ತು ಗೂಡೆಗಳೊಂದಿಗೆ ದೇವರನ್ನು ಅದ್ದೂರಿಯಾಗಿ ಊರಿನ ಹೆಬ್ಬಾಗಲಿನ ಮುಖೇನ ಅರಸಮ್ಮ ದೇವಾಲಯಕ್ಕೆ ವಿವಿಧ ವಾದ್ಯಗೋಷ್ಠಿಯೊಂದಿಗೆ ಕರೆದೊಯ್ಯಲಾಯಿತು.
ಅರಸಮ್ಮ ದೇವಾಲಯಕ್ಕೆ ತೆರಳಿ ಮೂರು ಸುತ್ತು ದೇವಾಲಯ ಪ್ರದಕ್ಷಿಣೆ ಹಾಕಿದ ನಂತರ ನೆರೆದಿದ್ದ ಊರಿನ ಗ್ರಾಮಸ್ಥರು, ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.