12 ದಿನದ ಬಳಿಕ ಅತಿಥಿ ಉಪನ್ಯಾಸಕರ ಧರಣಿ ತಿರುಗಿ ನೋಡಿದ ಜಿಲ್ಲಾಧಿಕಾರಿ; ಬೆಳಗಾವಿಗೆ ಪ್ರತಿಭಟನೆ ಶಿಫ್ಟ್

DCCCCC
Published on

ತುಮಕೂರು: ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ತರಗತಿ ಭಹಿಷ್ಕರಿಸಿ ಅನಿರ್ಧಾಷ್ಟಾವಧಿ ಧರಣಿ ಸತತ 12 ದಿನದ ಬಳಿಕ ಜಿಲ್ಲಾಡಳಿತದ ಕಣ್ಣಿಗೆ ಬಿದ್ದಿದೆ. ಸೋಮವಾರ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಆಗಮಿಸಿ ಮನವಿ ಸ್ವೀಕರಿಸಿದ್ದಾರೆ.

ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿ ಕಚೇರಿ ಮುಂಭಾಗವೇ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಯಾವೊಬ್ಬ ಅಧಿಕಾರಿ ಅಥವಾ ಜನಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿ ನೀಡಿ ಬೇಡಿಕೆ ಕೇಳದಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಅತಿಥಿ ಉಪನ್ಯಾಸಕರು ಮಂಗಳವಾರ ಬೆಳಗಾವಿ ಅಧಿವೇಶನ ನಡೆಯುವ ಸುವರ್ಣಸೌಧದ ಮುಂಭಾಗ ಪ್ರತಿಭಟನೆ ಮುಂದುವರಿಸಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ವಿ.ಧರ್ಮವೀರ ತಿಳಿಸಿದರು.

ತುಮಕೂರು ಜಿಲ್ಲೆಯಲ್ಲಿ 500 ಅತಿಥಿ ಉಪನ್ಯಾಸಕರಿದ್ದು ಈ ಪೈಕಿ 300 ಅತಿಥಿ ಉಪನ್ಯಾಸಕರು ಬೆಳಗಾವಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ವಕೀಲ ರಂಗಧಾಮಯ್ಯ, ಅತಿಥಿ ಉಪನ್ಯಾಸಕರಾದ ಡಾ.ಸವಿತಾ, ಆರ್.ಗಿರಿಜಮ್ಮ, ರ‍್ರಿಸ್ವಾಮಿ, ಶಂಕರಪ್ಪ, ಟಿ.ಸುರೇಶ್, ಗಿರೀಶ್, ವಿಜಯಮ್ಮ, ಹೇಮಾವತಿ, ವಿನುತಾ, ಕೆ.ಟಿ.ಶ್ರೀನಿವಾಸ್, ಡಾ.ಶಿವಣ್ಣ ತಿಮ್ಲಾಪುರ್, ಹನುಮಂತರಾಯಪ್ಪ, ಶಿವಯ್ಯ ಮತ್ತಿತರರು ಇದ್ದರು.

ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಧರಣಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಜಿಲ್ಲೆಯಿಂದಲೂ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ತೆರಳಿರುವ ಬಗ್ಗೆಯೂ ಸರ್ಕಾರದ ಗಮನಕ್ಕೆ ತರುತ್ತೇನೆ.
ಕೆ.ಶ್ರೀನಿವಾಸ್
ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net