

ತುಮಕೂರು: ಸೇವಾ ಭದ್ರತೆ ಮತ್ತು ಖಾಯಾಮಾತಿಗೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿ ಭಹಿಷ್ಕರಿಸಿ ನಡೆಸುತ್ತಿರುವ ಧರಣಿಯ ಎಫೆಕ್ಟ್ ವಿದ್ಯಾರ್ಥಿಗಳಿಗೂ ತಟ್ಟಿದೆ.
ಜಿಲ್ಲೆಯ ಎಲ್ಲಾ 20 ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿಗಳನ್ನು ಭಹಿಷ್ಕರಿಸಿದ್ದ ಅತಿಥಿ ಉಪನ್ಯಾಸಕರು ನಗರದ ಗಾಜಿನಮನೆಯಲ್ಲಿ ಸಭೆ ನಡೆಸಿದ ನಂತರ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ ಮಾತನಾಡಿ, ಸೇವಾ ಭದ್ರತೆ ಮತ್ತು ಖಾಯಾಮಾತಿಗೆ ಸಾಕಷ್ಟು ವರ್ಷದಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಸರ್ಕಾರ ಗಮನ ನೀಡದ ಹಿನ್ನೆಲೆಯಲ್ಲಿ ಧರಣಿ ಆರಂಭಿಸಲಾಗಿದೆ ಎಂದರು.
ಅತಿಥಿ ಉಪನ್ಯಾಸಕ ಡಾ.ಶಿವಣ್ಣ ತಿಮ್ಮಲಾಪುರ ಮಾತನಾಡಿ, ರಾಜ್ಯಸರ್ಕಾರ ಬೇರೆ,ಬೇರೆ ಇಲಾಖೆಗಳಲ್ಲಿನ ನೌಕರರನ್ನು ಖಾಯಳಗೊಳಿಸುತ್ತದೆ. ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳಿಂದ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆ ಹಾಗಾಗಿ, ಅನಿವಾರ್ಯವಾಗಿ ತರಗತಿಗಳನ್ನು ಭಹಿಷ್ಕರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಲೋಕೇಶ್, ಶಶಿಧರ, ಕಾಂತರಾಜು, ಡಾ.ಎಂ.ಟಿ.ಮಲ್ಲಿಕಾರ್ಜುನ್, ಶಂಕರಪ್ಪ, ಕಂಚಿರಾಯಪ್ಪ, ಕೃಷ್ಣೇಗೌಡ, ಡಾ.ಸವಿತಾ, ವೇದಮೂರ್ತಿ ಮತ್ತಿತರರು ನೇತೃತ್ವ ವಹಿಸಿದ್ದರು.