ವಾಹನಗಳಿಗೆ ಗಂಗಾಧರೇಶ್ವರ ದೇವಾಲಯದ ಬಸವನ ಕಿರಿಕ್; ಪ್ರಯಾಣಿಕರು ಹೈರಾಣ

22222
Published on

ಕೊರಟಗೆರೆ: ಪಟ್ಟಣದ ಗಂಗಾಧರೇಶ್ವರ ದೇವರಿಗೆ ಬಿಟ್ಟಿರುವ ಬಸವ ರಸ್ತೆಯಲ್ಲಿ ಚಲಿಸುವ ವಾಹನಗಳ ಅಡ್ಡಗಟ್ಟಿ ಕಿರಿಕಿರಿ ಮಾಡಿರುವ ವೀಡಿಯೋ ವೈರಲ್ ಆಗಿದೆ.

ವಾಹನಗಳ ಶಬ್ಧ ಹಾಗೂ ಹಾರನ್‌ಗೆ ರಚ್ಚಿಗೇಳುವ ಬಸವ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿ, ವಾಹನಗಳಿಗೆ ಗುದ್ದಲು ಯತ್ನಿಸಿರುವುದು ನಿವಾಸಿಗಳನ್ನು ಭಯಗೊಳಿಸಿದೆ.

ಶನಿವಾರ ಖಾಸಗಿ ಬಸ್‌ಗೆ ಅಡ್ಡಲಾಗಿ ನಿಂತು ಮುಂದೆ ಚಲಿಸಲು ಬಿಡದೆ ಸತಾಯಿಸಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಯಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net