ಬಟ್ಟೆ ಒಗೆಯುವ ವಿಚಾರದ ಗಲಾಟೆ: ಜೈಲು ಶಿಕ್ಷೆ

The offender is sentenced to life imprisonment
Published on

ತಿಪಟೂರು: ಬಟ್ಟೆ ಒಗೆಯುವ ವಿಚಾರಕ್ಕೆ ನಡೆದಿದ್ದ ಗಲಾಟೆಯಲ್ಲಿ ನಾಗರಾಜು ಹಾಗೂ ಅವರ ಪತ್ನಿ ಗಂಗಮ್ಮ ಎಂಬುವವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಹೋಬಳಿಯ ಅಜ್ಜೇನಹಳ್ಳಿಯ ಭಾಗ್ಯಮ್ಮ, ಅಶೋಕ, ಲಿಂಗರಾಜು, ಜಗದೀಶ್​, ದ್ರಾಕ್ಷಾಯಿಣಿ, ಶಾರದಮ್ಮ, ಶಿವಣ್ಣ, ಕುಮಾರ್​ ಮತ್ತು ಸಿದ್ದೇಶ್​ ಎಂಬುವವರಿಗೆ ತಿಪಟೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷಗಳ ಶಿಕ್ಷೆ ವಿಧಿಸಿದೆ.

ನ್ಯಾಯಾಧೀಶೆ ಪುಪ್ಷಾವತಿ ಆರೋಪ ಸಾಬೀತಾದ ಕಾರಣ ಭಾರತ ದಂಡ ಸಮಿತಿ ಪ್ರಕಾರ 143, 147, 148, 451, 427, 324ರ ಅಪರಾಧಗಳಿಗಾಗಿ 3 ವರ್ಷಗಳ ಶಿಕ್ಷೆ ಮತ್ತು 2.50ಲಕ್ಷ ರೂ. ದಂಡ ವಿಧಿಸಿದ್ದು ದೂರುದಾರಿಗೆ 2.30ಲಕ್ಷ ರೂ.. ನೀಡಲು ಸೂಚಿಸಿದೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಮಹದೇವಪ್ಪ ಈರಪ್ಪ ಗಡದ್​ ಹಾಗೂ ಬಿ.ಕೆ.ನಾಗರತ್ನಮ್ಮ ವಾದ ಮಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net