1.84ಕೋಟಿ ರೂ. ವೆಚ್ಚದಲ್ಲಿ 69687 ಮೇವಿನ ಬೀಜದ ಮಿನಿ ಕಿಟ್; ಪಶು ಆಸ್ಪತ್ರೆಯಲ್ಲಿ ವಿತರಣೆಗೆ ಸಿದ್ಧತೆ

17TMK_Jaanuvaaru_Mevu
Published on

ತುಮಕೂರು: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ತೀವ್ರಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ರೈತರಿಗೆ 1.84ಕೋಟಿ ರೂ. ವೆಚ್ಚದಲ್ಲಿ 69687 ಮೇವಿನ ಬೀಜದ ಮಿನಿ ಕಿಟ್ ನೀಡಲು ಮುಂದಾಗಿದೆ.

ಕೊರಟಗೆರೆ ತಾಲೂಕು ಗಟ್ಲಗೊಲ್ಲಹಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ,ಪರಮೇಶ್ವರ ಗುರುವಾರ ಸಾಂಕೇತಿಕವಾಗಿ ಮೇವಿನ ಬೀಜದ ಕಿರು ಪಟ್ಟಣಗಳನ್ನು ರೈತರಿಗೆ ರೈತರಿಗೆ ವಿತರಣೆ ಮಾಡಿದ್ದಾರೆ.

ನೀರಾವರಿ ಸೌಲಭ್ಯ ಹೊಂದಿರುವ ಜಾನುವಾರು ಹೊಂದಿರುವ ರೈತರು ಪಶು ಪಾಲನಾ ಇಲಾಖೆಯಿಂದ ಮೇವಿನ ಬೀಜಗಳ ಕಿಟ್‌ಗಳನ್ನು ಉಚಿತವಾಗಿ ಪಡೆದು ಮೇವು ಬೆಳೆದುಕೊಳ್ಳಬಹುದಾಗಿದೆ.

ಈಗಾಗಲೇ ಜಿಲ್ಲೆಯ ಎಲ್ಲಾ ಪಶು ವೈದ್ಯಕೀಯ ಆಸ್ಪತ್ರೆಗಳಿಗೆ ಮೇವಿನ ಬೀಜದ ಕಿಟ್ ಸರಬರಾಜಾಗಿದ್ದು ಶುಕ್ರವಾರ ಬೆಳಗ್ಗೆಯಿಂದಲೇ ರೈತರಿಗೆ ಉಚಿತವಾಗಿ ನೀಡಲು ಜಿಲ್ಲಾಡಳಿತ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net