ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆ

crop-survey
Published on

ತುಮಕೂರು: ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ರೈತರು ತಮ್ಮ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಲು 2023-24ನೇ ಸಾಲಿನ ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ.

ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ಪರಿಹಾರ, ಬೆಳೆ ವಿಮೆ, ಬೆಳೆ ಸಾಲ, ಬೆಂಬಲ ಬೆಲೆ ಯೋಜನೆ ಮತ್ತು ಸರ್ಕಾರದ ಮತ್ತಿತರ ಯೋಜನೆಗಳ ಸವಲತ್ತುಗಳನ್ನು ಪಡೆಯಲು ಬಳಸಲಾಗುತ್ತದೆ. ಆದ್ದರಿಂದ ರೈತ ಬಾಂಧವರು ತಮ್ಮ ಮೊಬೈಲ್ ಆ್ಯಪ್ ಬಳಸಿ ತಾವು ಬೆಳೆದಿರುವ ಬೆಳೆಗಳಿಗೆ ಸ್ವತಃ ತಾವೇ ಬೆಳೆ ಸಮೀಕ್ಷೆ ಮಾಡಿ ಬೆಳೆ ವಿವರ ದಾಖಲಿಸಬೇಕಿದೆ.

ಮೊಬೈಲ್ ಆಪ್ ಬಳಸಲು ನಿಮ್ಮ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯಬಹುದು.

ಪ್ಲೇ ಸ್ಟೋರ್‌ನಲ್ಲಿ ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್- 2023-24 ಡೌನ್‌ಲೊಡ್ ಮಾಡಿಕೊಳ್ಳಬೇಕು.ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಲು ಆಧಾರ್ ಸಂಖ್ಯೆ ನಮೂದಿಸಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ದಾಖಲಿಸಿ ಸಲ್ಲಿಸಿ, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸಬಹುದು.
ನಮೂದಿಸಿದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ದಾಖಲಿಸಿ ಮೊಬೈಲ್ ಆಪ್ ಫ್ರೂಟ್ಸ್ ತಂತ್ರಾAಶಕ್ಕೆ ಸಂಪರ್ಕಗೊAಡಿದ್ದ ರೈತರ ಗುರುತಿನ ಸಂಖ್ಯೆಯಲ್ಲಿ ಸೇರ್ಪಡೆಯಾದ ಎಲ್ಲಾ ಪಹಣಿ ವಿವರ, ಪಾಲಿಗಾನ್ ಹಾಗೂ ಜಿ.ಐ.ಎಸ್. ಮ್ಯಾಪ್ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಿ, ಎಲ್ಲಾ ಸರ್ವೇ ನಂಬರ್‌ಗಳ ವಿವರ ಕಾಣಿಸುತ್ತದೆ. ಬೆಳೆ ಸಮೀಕ್ಷೆ ಪ್ರಾರಂಭಿಸಲು ಸರ್ವೆ ನಂಬರ್ ಆಯ್ಕೆ ಮಾಡಿ, ಸದರಿ ಸರ್ವೇ ನಂಬರ್‌ನ ಗಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ, ತಾವು ಬೆಳೆದ ಬೆಳೆಯ ವಿಸ್ತೀರ್ಣದ ಜತೆಗೆ ಪ್ರತಿ ಬೆಳೆಯ ಎರಡು ಫೋಟೋ ತೆಗೆದು ಮಾಹಿತಿ ದಾಖಲಿಸಬೇಕು.
ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ಅಪ್‌ಲೋಡ್ ಮಾಡುವುದು ಮತ್ತು ಮಾಹಿತಿಗಾಗಿ ಉಚಿತ ಸಹಾಯವಾಣಿ 8448447715 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net