ಸೋಮಣ್ಣ, ಶಾಲಿನಿ ರಜನೀಶ್​ ಹೆಸರಿನ ನಕಲಿ ಶಿಫಾರಸು ಪತ್ರ!

01TMK_FIR_
Published on

ತುಮಕೂರು: ಕೇಂದ್ರ ಸಚಿವ ವಿ.ಸೋಮಣ್ಣ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್​ ಅವರ ಲೆಟರ್​ಹೆಡ್​ ನಕಲಿ ಮಾಡಿಕೊಂಡು ವಿವಿಧ ಇಲಾಖೆಗಳಲ್ಲಿ ಸೌಲಭ್ಯ ಪಡೆಯಲು ಶಿಫಾರಸು ಪತ್ರ ನೀಡುತ್ತಿದ್ದ ಆರೋಪಿಯನ್ನು ಹೊಸಬಡಾವಣೆ ಪೊಲೀಸರು ಪತ್ತೆಯಚ್ಚಿ ಬಂಧಿಸಿದ್ದಾರೆ.

ಕೇಂದ್ರ ಸಚಿವ ವಿ.ಸೋಮಣ್ಣ ಅವರ ಆಪ್ತ ಸಹಾಯಕ ಮಹೇಶ್​ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಧುಗಿರಿ ತಾಲೂಕು ಮಿಡಿಗೇಶಿ ಮೂಲದ ಗೋವರ್ಧನ(35)ಮ ಎಂಬುವವರನ್ನು ಬಂಧಿಸಿದ್ದಾರೆ.

ಆರೋಪಿ ಗೋವರ್ಧನ ತಾನು ಸಚಿವರು, ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಸ್ಥಳಿಯರನ್ನು ನಂಬಿಸಿ ನಕಲಿ ಶಿಾರಸು ಪತ್ರಗಳನ್ನು ಸೃಷ್ಠಿಸಿ ವಂಚಿಸುತ್ತಿದ್ದ ಎನ್ನಲಾಗಿದೆ.

ಕೊರಟಗೆರೆ ತಾಲೂಕು ಚಿಲಗಾನಹಳ್ಳಿಯ ಯುವಕನಿಂದ 30 ಸಾವಿರ ರೂ. ಪಡೆದು ಸಂಸದರ ಕಚೇರಿಯಲ್ಲಿ ಸಹಾಯಕ ಹುದ್ದೆಗೆ ನೇಮಿಸಿ ಆದೇಶಿಸಿರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​ ಅವರ ಹೆಸರಿನಲ್ಲಿ ನಕಲಿ ಪತ್ರ ನೀಡಿದ್ದನು. ಯುವಕ ಕೆಲಸಕ್ಕೆ ಸೇರ್ಪಡೆಯಾಗಲು ಸೋಮಣ್ಣ ಅವರ ಕಚೇರಿಗೆ ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಮತ್ತೊಂದು ಪ್ರಕರಣದಲ್ಲಿ ತುಮಕೂರು ವಿವಿಯಲ್ಲಿ ಪದವಿ ಸೇರ್ಪಡೆಗೆ ಸೀಟು ಕೊಡಿಸುತ್ತೇನೆ ಎಂದು 8000ರೂ. ಪಡೆದು ವಂಚಿಸಿರುವುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net