ಎತ್ತಿನಹೊಳೆಗೆ ಭೂಮಿ ಕಳೆದುಕೊಂಡವರಿಗೆ ಶೀಘ್ರ ಪರಿಹಾರ; ಜಿಲ್ಲಾಧಿಕಾರಿ ಭರವಸೆ

yettinahole new
Published on

ತುಮಕೂರು: ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಎತ್ತಿನಹೊಳೆ ನೀರಾವರಿ ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳುತ್ತಿರುವ ಹಾಗೂ ಐತೀರ್ಪು(ಅವಾರ್ಡ್) ನೋಟೀಸ್ ನೀಡಿರುವ ಜಮೀನಿನ ಖಾತೆದಾರರಿಗೆ ಪರಿಹಾರ ದೊರೆಯದಿದ್ದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದಲ್ಲಿ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದ್ದಾರೆ.

ಪರಿಹಾರ ಪಾವತಿಸುವ ಸಲುವಾಗಿ ಭೂಮಾಲೀಕರಿಂದ ಅಗತ್ಯ ದಾಖಲೆಗಳನ್ನು ಪಡೆಯಲು ಅಧಿಕಾರಿ ಮತ್ತು ತಂಡ ನಿಗಧಿತ ದಿನಾಂಕ ಸಂಬAಧಿಸಿದ ಭೂ ಮಾಲೀಕರ ಮನೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪಡೆಯಲಿದ್ದಾರೆ.

ನಂತರ ಪಡೆದ ದಾಖಲೆಗಳನ್ನು ಪರಿಶೀಲಿಸಿ ಭೂ ಮಾಲೀಕರ ಬಳಿ ದಾಖಲೆಗಳು ಲಭ್ಯವಿಲ್ಲದಿದ್ದಲ್ಲಿ ಸಂಬAಧಪಟ್ಟ ಇಲಾಖಾಧಿಕಾರಿಗಳಿಂದ ದಾಖಲೆಗಳನ್ನು ಒದಗಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಎತ್ತಿನಹೊಳೆ ಯೋಜನೆ ವ್ಯಾಪ್ತಿಗೊಳಪಡುವ ಗ್ರಾಮಗಳಿಗೆ ನಿಗಧಿತ ದಿನಾಂಕದAದು ಸಂಬAಧಿಸಿದ ಗ್ರಾಮ ಆಡಳಿತಾಧಿಕಾರಿ, ಇಂಜಿನಿಯರ್‌ಗಳು ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಸಿಬ್ಬಂದಿ ಭೇಟಿ ನೀಡಿದಾಗ ಪರಿಹಾರ ಪಡೆಯದಿರುವ ಭೂ ಮಾಲೀಕರು ಅಗತ್ಯ ದಾಖಲೆ ಒದಗಿಸಬೇಕು.

ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುವ ದಿನಾಂಕಗಳನ್ನು ನಿಗಧಿಪಡಿಸಲಾಗಿದ್ದು, ಅದರನ್ವಯ ಜೂನ್ 24ರಂದು ತಿಪಟೂರು ತಾಲೂಕಿನ ಅಣ್ಣಾಪುರ, ಗೆದ್ಲೆಹಳ್ಳಿ, 25ರಂದು ಕಂಚಾಘಟ್ಟ, 26ರಂದು ಸಿದ್ಧನಹಳ್ಳಿ, ಜಕ್ಕನಹಳ್ಳಿ. 27ರಂದು ಹಟ್ನ, ರಜತಾದ್ರಿಪುರ; 28ರಂದು ಕರಡಿ, ನ್ಯಾಕೇನಹಳ್ಳಿ; 29ರಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜಯಚಾಮರಾಜಪುರ, ಜುಲೈ 1ರಂದು ಗುಬ್ಬಿ ತಾಲೂಕು ಹರೇನಹಳ್ಳಿ, ಜು.2ರಂದು ತುಮಕೂರು ತಾಲ್ಲೂಕಿನ ಕಲ್ಸೆಟ್‌ಗುಂಟೆ, ಅಪ್ಪಯ್ಯನಪಾಳ್ಯ; ಜು.3ರಂದು ತಿಪಟೂರು ತಾಲ್ಲೂಕಿನ ರಾಮಶೆಟ್ಟಿಹಳ್ಳಿ, ಬೊಮ್ಮಲಾಪುರ ಗ್ರಾಮಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಲಿದ್ದಾರೆ. ದಾಖಲೆಗಳನ್ನು ಸಲ್ಲಿಸದೆ ಈವರೆಗೂ ಪರಿಹಾರ ಪಡೆಯದ ಭೂಮಾಲೀಕರು ಸ್ಥಳದಲ್ಲಿ ಹಾಜರಿದ್ದು, ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸುವುದರೊಂದಿಗೆ ಸಮಸ್ಯೆಗಳಿದ್ದಲ್ಲಿ ಅವರ ಗಮನಕ್ಕೆ ತರಬೇಕೆಂದು ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net