6ನೇ ತರಗತಿ ಪ್ರವೇಶಕ್ಕೆ ವಿಶೇಷಚೇತನರಿಗೆ ಅವಕಾಶ

English-medium-school
Published on

ತುಮಕೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ. ಡಾ.ಬಿ.ಆರ್​.ಅಂಬೇಡ್ಕರ್​, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ 2024-&25ನೇ ಸಾಲಿನ 6ನೇ ತರಗತಿ ನೇರ ಪ್ರವೇಶಕ್ಕಾಗಿ ವಿಶೇಷ ದುರ್ಬಲ ವರ್ಗದ ವಿದ್ಯಾರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸಫಾಯಿ ಕರ್ಮಚಾರಿ, ಚಿಂದಿ ಆಯುವವರ, ಚಿತಾಗಾರದ ಕಾರ್ಮಿಕರ, ಸ್ಮಶಾನ ಕಾರ್ಮಿಕರ, ಮಾನ್ಯುಯಲ್​ ಸ್ಕ್ಯಾವೆಂಜರ್​ಗಳ, ಜೀತ ವಿಮುಕ್ತ, ರಕ್ಷಿಸಲ್ಪಟ್ಟ ದೇವದಾಸಿಯರ, ಬಾಲ ಕಾರ್ಮಿಕ ಮಕ್ಕಳು, ಶೇ.10.25ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ವಿಶೇಷ ಚೇತನ ಮಕ್ಕಳು, ಒಬ್ಬ ಪೋಷಕರನ್ನು ಹೊಂದಿರುವ, ಅನಾಥ ಮಕ್ಕಳು, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಸೇರಿದ ಮಕ್ಕಳು, ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ, ಸೇವಾನಿರತ ಸೈನಿಕರ ಮಕ್ಕಳು, ನಿವೃತ್ತ ಸೈನಿಕರ ಮಕ್ಕಳು, ಎಸ್​ಸಿ, ಎಸ್​ಟಿ ಆಶ್ರಮ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ಎಚ್​ಐವಿ ತುತ್ತಾದ ಪೋಷಕರ ಮಕ್ಕಳು ಪ್ರವೇಶ ಕೋರಿ ಅರ್ಜಿ ಸಲ್ಲಿಸಬಹುದು.

ಆಸಕ್ತ ವಿದ್ಯಾರ್ಥಿಗಳ ಪೋಷಕರು ವಿಶೇಷ ದುರ್ಬಲ ವರ್ಗಕ್ಕೆ ಸೇರಿರುವ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ, ಸ್ವಯಂ ಘೋಷಿತ ಪ್ರಮಾಣ ಪತ್ರ, ವಿದ್ಯಾರ್ಥಿಯ ಆಧಾರ್​ ಕಾರ್ಡ್​, ವಿದ್ಯಾರ್ಥಿಯ ಎಸ್​.ಟಿ.ಎಸ್​ ಸಂಖ್ಯೆ, ಮೊಬೈಲ್​ ನಂಬರ್​, ಇತ್ಯಾದಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net