

ತುಮಕೂರು: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಧಾರವಾಡದ ಕರ್ನಾಟಕ ಉದ್ಯಮ ಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್) ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ತುಮಕೂರು ಜಿಲ್ಲೆಯಲ್ಲಿ ಸೆ.23 ರಿಂದ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸ್ವಂತ ಉದ್ಯಮ ಸ್ಥಾಪಿಸಲಿಚ್ಛಿಸುವ ಮಹಿಳೆ ಹಾಗೂ ಪುರುಷರಿಗೆ ಪ್ರೇರಣೆ, ಸ್ವಂತ ಉದ್ಯಮ ಸ್ಥಾಪನೆಗಾಗಿ ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳಿಂದ ದೊರೆಯುವ ನೆರವು, ಪ್ರೋತ್ಸಾಹ, ಯೋಜನೆ ಆಯ್ಕೆ, ಮಾರುಕಟ್ಟೆ, ಯೋಜನಾ ವರದಿ ತಯಾರಿಕೆ, ತೆರಿಗೆ ಮತ್ತು ಇತರೆ ಕೈಗಾರಿಕಾ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು.
ಎಸ್ಎಸ್ಎಲ್ಸಿ ಪಾಸಾದ, ಶೇ.25ರಷ್ಟು ಬಂಡವಾಳ ಹೂಡಲು ಶಕ್ತರಿರುವ 21 ರಿಂದ 45 ವರ್ಷದೊಳಗಿನ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಸೆಪ್ಟೆಂಬರ್ 20ರೊಳಗಾಗಿ ಜಂಟಿ ನಿರ್ದೇಶಕ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ತುಮಕೂರು. ಇವರಿಗೆ ಅರ್ಜಿ ಸಲ್ಲಿಸಬಹುದು.
ಮಾಹಿರಿಗೆ ಮೊ.8073313988 ಸಂಪರ್ಕಿಸಿ.