

ತುಮಕೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಒಂಟಿ ಪ್ರಸರಣ ಮಾರ್ಗದಿಂದ ಸುಮಾರು 8.60 ಕಿಮೀ ಉದ್ದದ ಮಾರ್ಗ ನಿಮಾರ್ಣ ಕಾಮಗಾರಿಯನ್ನು ಸೆ.18ರಂದು ಅಥವಾ ತದನಂತರ ವಿದ್ಯುದ್ದೀಕರಣ ಗೊಳಿಸಲಿದೆ.
ಈ ಪ್ರಸರಣ ಮಾರ್ಗ ಜಿಲ್ಲೆಯ ತಿಪಟೂರು ತಾಲೂಕು ಕಿಬ್ಬನಹಳ್ಳಿ ಹೋಬಳಿಯ ಕರಡಾಳು, ಕೊಟಗೇಹಳ್ಳಿ, ನೊಣವಿನಕೆರೆ ಹೋಬಳಿಯ ಹಾರೋಘಟ್ಟ, ಕುರುಬರ ಮಲ್ಲೇನಹಳ್ಳಿ; ತುರುವೇಕೆರೆ ತಾಲೂಕು ಕಸಬ ಹೋಬಳಿಯ ಸೀಗೆಹಳ್ಳಿ, ಕೋಲಘಟ್ಟ, ಕೋಲಘಟ್ಟಕಾವಲ್ ಗ್ರಾಮಗಳ ಸರಹದ್ದಿನಲ್ಲಿ ಹಾದು ಹೋಗಲಿದೆ.
ಈ ಗ್ರಾಮಗಳಲ್ಲಿ ಗೋಪುರಗಳನ್ನು ಹತ್ತುವುದಾಗಲೀ, ಲೋಹದ ತಂತಿ, ಹಸಿರು ಬಳ್ಳಿ, ಕೊಂಬೆ ಇತ್ಯಾದಿಗಳನ್ನು ವಿದ್ಯುತ್ ಪ್ರವಹಿಸುವ ತಂತಿಗಳಿಗೆ ಎಸೆಯುವುದಾಗಲೀ ಅಥವಾ ದನಕರುಗಳನ್ನು ಗೋಪುರಗಳಿಗೆ ಕಟ್ಟುವುದಾಗಲಿ ಮಾಡಬಾರದಾಗಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಸೂಚನೆ ನೀಡಿದ್ದಾರೆ.