ಈರಬೊಮ್ಮಕ್ಕ ದೇವಿಗೆ ಈಚಲು ಸೇವೆ; ಈಚಲು ಮರದ ಮುಳ್ಳಿನ ನಡುವೆ ಹೋಗುವ ಕೌತುಕ

13HULIYAR3
Published on

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ದಮ್ಮಡಿಹಟ್ಟಿಯಲ್ಲಿ ಕಾರ್ತಿಕದ ಅಂಗವಾಗಿ ಈರಬೊಮ್ಮಕ್ಕ ದೇವಿಗೆ ಈಚಲು ಸೇವೆ ನೆರವೇರಿತು.

ದಮ್ಮಡಿಹಟ್ಟಿಯ ಈರಬೊಮ್ಮಕ್ಕ ದೇವಿ ಹಾಗೂ ಮಲ್ಲಮ್ಮನವರನ್ನು ಪೂಜಿಸಿ ನಡೆಮುಡಿಯಲ್ಲಿ ಆರತಿ ಹಾಗೂ ಮಂಗಳವಾದ್ಯದೊAದಿಗೆ ಲಿಂಗಪ್ಪನಪಾಳ್ಯ ಹಾಗೂ ಗೌಡಗೆರೆ ಮಧ್ಯದಲ್ಲಿರುವ ಈಚಲು ಮರವಿರುವ ಕೊಂಡದೋಣಿ ಸ್ಥಳದ ಬಳಿಗೆ ಕರೆತಂದರು.

ಪೂಜೆ, ಪನಿವಾರ, ಮಣೇವು ಸಲ್ಲಿಸಿದ ಬಳಿಕ ದೇವರ ಅವಾಹನೆಯಾದವರು ಭಕ್ತರ ಉದ್ಘೋಷ ಹಾಗೂ ವಾದ್ಯದ ನಾದದೊಂದಿಗೆ ಮುಳ್ಳಿನಿಂದ ಅವೃತವಾದ ಈಚಲು ಮರವನ್ನು ಸರಸರನೇ ಏರಿ ಅದರ ತುದಿವರೆಗೆ ಹತ್ತಿ ಜನರತ್ತ ಒಮ್ಮೆ ನೋಡಿ ದೇವಿಯ ಜೈಕಾರ ಹಾಕಿ ಭಕ್ತರಿಗೆ ಆಶಿರ್ವದಿಸಿ ಬಳಿಕ ನೆಗೆಯುವುದು ವಿಶೇಷ ಎನ್ನಿಸಿದೆ.

ಮುಳ್ಳಿನಿಂದ ಅವೃತವಾದ ಈಚಲು ಮರ ಹತ್ತುವ ಕೌತುಕವನ್ನು ನೋಡಲು ಗೌಡಗೆರೆ, ದಮ್ಮಡಿಹಟ್ಟಿ, ಕುರಿಹಟ್ಟಿ, ಲಿಂಗಪ್ಪನಪಾಳ್ಯ, ಕೋಡಿಪಾಳ್ಯ ಸೇರಿದಂತೆ ಸುತ್ತಮುತ್ತ ಹಳ್ಳಿಗಳ ಅಪಾರ ಸಂಖ್ಯೆ ಭಕ್ತರು ಇಲ್ಲಿ ಸೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net