ಬಿಜೆಪಿ ಬಣ ರಾಜಕೀಯ ಬೇಸರ ತರಿಸಿದೆ: ಸದಾನಂದಗೌಡ

DVS
Published on

ತುಮಕೂರು: ಶಿಸ್ತಿನ ಪಕ್ಷ ಎನ್ನಿಸಿಕೊಂಡಿದ್ದ ಬಿಜೆಪಿಯಲ್ಲಿ ಬಣ ರಾಜಕೀಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬಗ್ಗೆ ಡಿ.ವಿ.ಸದಾನಂದಗೌಡ ಬೇಸರ ವ್ಯಕ್ತಪಡಿಸಿದರು.

ಶಿಸ್ತಿನಿಂದಲೇ ಜನರ ವಿಶ್ವಾಸ ಪಡೆದಿರುವ ಪಕ್ಷದ ಭವಿಷ್ಯವನ್ನು ನೆನಪಿಸಿಕೊಂಡರೆ ಬೇಸರ ಎನ್ನಿಸುತ್ತದೆ ಎಂದು ಕುಣಿಗಲ್​ ಪಟ್ಟಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಅಭಿಪ್ರಾಯ ಹಂಚಿಕೊಂಡರು.

ರಾಜ್ಯ ಬಿಜೆಪಿಯಲ್ಲಿ ನೆಡುತ್ತಿರುವ ಬಣ ರಾಜಕೀಯ ದುರಾದಷ್ಟ ಸಂಗತಿಯಾಗಿದೆ, ಕರ್ನಾಟಕ ಬಿಜೆಪಿ ಇಂತಹ ಅದ@ಪಥನಕ್ಕೆ ಇಳಿದಿರುವುದು ಸರಿಯಲ್ಲ, ನಾಲ್ಕು ಗೋಡೆ ಮಧ್ಯೆ ತಿರ್ಮಾನ ಆಗಬೇಕಾಗಿರುವ ವಿಚಾರವನ್ನು ಆರೋಪ, ಪ್ರತ್ಯಾರೋಪದಲ್ಲಿ ತೊಡಗಿರುವುದು ಯಾರಿಗೂ ಶೋಭೆ ತರುವುದಿಲ್ಲ.

ಒಬ್ಬರನ್ನು ಮತ್ತೊಬ್ಬರರು ಬೆದುಕೊಳ್ಳುತ್ತಿರುವುದನ್ನು ಇಡೀ ಸಮಾಜ ಗಮನಿಸುತ್ತದೆ, ಅಯ್ಯೋ ಬಿಜೆಪಿ ಪರಿಸ್ಥಿತಿ ಹೀಗಾಗಿದೆಯೇ ಎಂಬ ಸಂದೇಹ ಜನರಲ್ಲಿ ಬರುತ್ತಿರುವುದು ಬೇಸರ ಹಾಗೂ ದುರ್ದೈವ ಎಂದರು.

ರಾಜ್ಯದ ವಿಷಯವನ್ನು ಕೇಂದ್ರದ ವರಿಷ್ಠರ ಗಮನಕ್ಕೆ ತರಲಾಗಿದೆ, ಈ ವಿಚಾರದಲ್ಲಿ ಕೇಂದ್ರದ ನಾಯಕರು ವಿಳಂಬ ಮಾಡುತ್ತಿರುವುದು, ಗುಂಪುಗಳನ್ನು ಒಟ್ಟುಗೂಡಿಸಲು ಪ್ರಯತ್ನ ಮಾಡದೇ ಇರುವುದು, ಅಶಿಸ್ತಿನ ಬಗ್ಗೆ ಸರಿಯಾದ ಹೆಜ್ಜೆಗಳನ್ನು ಇಡದೇ ಇರುವುದು ಮತ್ತಷ್ಟು ಬೇಸರ ತಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net