

ತುಮಕೂರು: ತಿಪಟೂರು ನಗರದ ಶ್ರೀಸತ್ಯ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಡಿ.9 ಮತ್ತು 10ರಂದು ನಡೆಯಲಿದ್ದು ಈ ಸಂದರ್ಭದಲ್ಲಿ ಶಾಂತಿ ಕಾಪಾಡುವ ದೃಷ್ಠಿಯಿಂದ ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಆದೇಶಿಸಿದ್ದಾರೆ.
ಡಿ.9ರಂದು ಬೆಳಗ್ಗೆ 6ರಿಂದ ಡಿ.11ರ ಬೆಳಗ್ಗೆ 6ರ ವರೆಗೆ ತಿಪಟೂರು ನಗರದ 5 ಕಿಮೀ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಷಿಸಲಾಗಿದೆ, ಕೆಎಸ್‌ಬಿಸಿಎಲ್ ಡಿಪೋ ಹೊರತುಪಡಿಸಿ ಎಲ್ಲಾ ತರಹದ ಮದ್ಯದಂಗಡಿಗಳನ್ನು ಮುಚ್ಚಿಸಿ ಸೂಚಿಸಲಾಗಿದೆ.
ಡಿಸೆಂಬರ್ 9 ಮತ್ತು 10ರಂದು ವಿವಿಧ ಜನಪದ ಕಲಾ ತಂಡ, ನೃತ್ಯ ತಂಡಗಳೊAದಿಗೆ ನಗರದ ವಿವಿಧ ಬೀದಿಗಳಲ್ಲಿ ಅತ್ಯಂತ ವಿಜೃಂಭಣೆಯಿAದ ಮೆರವಣೆಗೆ ನಡೆಯಲಿದೆ. ಈ ಸಂದರ್ಭದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.