ಹನಿ ನೀರಾವರಿ ಸೌಲಭ್ಯಕ್ಕಾಗಿ ಅರ್ಜಿ

Drip irrigation
Published on

ತುಮಕೂರು: ತೋಟಗಾರಿಕಾ ಇಲಾಖೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅಡಕೆ ಬೆಳೆ ಹೊರತು ಪಡಿಸಿ 2024-25ನೇ ಸಾಲಿಗಾಗಿ ಇತರೆ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಘಟಕ ಅಳವಡಿಸಿಕೊಳ್ಳಲಿಚ್ಛಿಸುವ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ರೈತ ಫಲಾನುಭವಿಗಳು ಹತ್ತಿರದ ಗ್ರಾಮ ಪಂಚಾಯಿತಿ, ತೋಟಗಾರಿಕೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಬಹುದು.

ಆಸಕ್ತ ರೈತರು ಮಾಹಿತಿಗೆ ತುಮಕೂರು- 9686503500, 8970870918; ಗುಬ್ಬಿ- 9535781963, 7259243329, ಶಿರಾ- 9844042356, ಕುಣಿಗಲ್​-9342959690, 9980073909; ತಿಪಟೂರು- 9845014293, 9964791910, ಚಿಕ್ಕನಾಯಕನಹಳ್ಳಿ- 9686056705, 9538272964 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net