ಸಿದ್ಧಗಂಗಾಶ್ರೀಗಳ ಆಶಿರ್ವಾದ ಪಡೆದ ಡಾಲಿ

Daali
Published on

ತುಮಕೂರು: ಚಲನಚಿತ್ರ ನಟ ಡಾಲಿ ಧನಂಜಯ ಶುಕ್ರವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಅವರ ಮದುವೆ ಆಹ್ವಾನ ಪತ್ರಿಕೆಯನ್ನು ಶ್ರೀಸಿದ್ಧಲಿಂಗ ಸ್ವಾಮೀಜಿ ಅವರಿಗೆ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ನಂತರ ಕ್ಯಾತಸಂದ್ರದಲ್ಲಿರುವ ಸಹಕಾರ ಸಚಿವ ಕೆ.ಎನ್​.ರಾಜಣ್ಣ ನಿವಾಸಕ್ಕೆ ಭೇಟಿ ನೀಡಿ, ವಿವಾಹ ಸಮಾರಂಭಕ್ಕೆ ಆಗಮಿಸುವಂತೆ ಸಚಿವರ ಕುಟುಂಬದವರಿಗೆ ಮನವಿ ಮಾಡಿದರು. ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ಮತ್ತಿತರರು ಇದ್ದರು.

ಕೆಎಸ್​ಆರ್​ಟಿಸಿ ಅಧ್ಯಕ್ಷ ಎಸ್​.ಆರ್​.ಶ್ರೀನಿವಾಸ್​ ಅವರ ನಿವಾಸಕ್ಕೆ ಆಗಮಿಸಿ ಮದುವೆಗೆ ಆಹ್ವಾನಿಸಿದರು. ನಟ ದುಷ್ಯಂತ್​, ಜಿಲ್ಲಾ ಯುವ ಕಾಂಗ್ರೆಸ್​ ಅಧ್ಯಕ್ಷ ಶಶಿ ಹುಲಿಕುಂಟೇಮಠ್​, ಮುಖಂಡರಾದ ಸೂರ್ಯ ಮುಕುಂದರಾಜ್​, ಗಂಡಸಿ ಸದಾನಂದ್​, ವೀರೇಶ್​ ಹಾಲನೂರು, ತಿಪ್ಪೇಸ್ವಾಮಿ, ದಯಾನಂದ ಸಾಗರ್​, ಗಂಗಸಂದ್ರ ಶ್ರೇಯಸ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net