

ತುರುವೇಕೆರೆ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯ ಡಾ.ಹರಿಪ್ರಸಾದ್ ಮಹಿಳೆಯೊಬ್ಬರ ಹೆರಿಗೆಗೆ 3000ರೂ. ಲಂಚ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಡಿ.19ರಂದು ಹೆರಿಗೆಗಾಗಿ ದಾಖಲಾಗಿದ್ದ ಮಹಿಳೆಯ ಹೆರಿಗೆಯ ನಂತರ ವೈದ್ಯ ಡಾ.ಹರಿಪ್ರಸಾದ್ 3000ರೂ ಲಂಚ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು ಈ ಬಗ್ಗೆ ಆಕೆಯ ಬಂಧುಗಳು ಲೋಕಯುಕ್ತ ಪೋಲೀಸರಿಗೆ ದೂರು ನೀಡಿದ್ದರು.
ಗುರುವಾರ ಸಂಜೆ 3000ರೂ. ಪಡೆಯುವಾಗ ಪೋಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ದಾಳಿ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ರಾಮರೆಡ್ಡಿ, ಸಲೀಂ ಅಹ್ಮದ್, ಶಿವರುದ್ರಪ್ಪ ಇದ್ದರು.