

ತುಮಕೂರು: ಬಿಜೆಪಿ, ಕಾಂಗ್ರೆಸ್ಸಿಗಿಂತ ಮುಂಚಿತವಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ ರಣಕಲಿಗಳ ಹೆಸರುಗಳನ್ನು ಘೋಷಿಸುವ ಮೂಲಕ ಮಹಾಯುದ್ಧಕ್ಕೆ ರಣ ಕಹಳೆ ಮೊಳಗಿಸಿದೆ.
ಜಿಲ್ಲೆಯಲ್ಲಿ ತಿಪಟೂರು, ಶಿರಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು ನಿರೀಕ್ಷಿತ ಹೆಸರುಗಳು ಪಟ್ಟಿಯಲ್ಲಿವೆ. ಯಾವುದೇ ಅಚ್ಚರಿಯ ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಸಾಹಸಕ್ಕೆ ಪಕ್ಷದ ವರಿಷ್ಠರು ಕೈಯಿಟ್ಟಿಲ್ಲ. ಹಾಲಿ ಶಾಸಕರಾದ ಡಿ.ಸಿ.ಗೌರಿಶಂಕರ್, ಎಂ.ವಿ.ವೀರಭದ್ರಯ್ಯ ಹಾಗೂ ಗುಬ್ಬಿ ಕ್ಷೇತ್ರದಿಂದ ನಾಗರಾಜು ಹೆಸರು ಸೇರಿದಂತೆ ಉಳಿದ 6 ಕ್ಷೇತ್ರಗಳಿಗೆ ಕಳೆದ ಬಾರಿಯ ಪರಾಜಿತ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲಾಗಿದೆ.
ಪಕ್ಷದ ಸಂಸದೀಯ ಮಂಡಳಿ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಅನುಮೋದನೆ ಮೇರೆಗೆ 2023ನೇ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ನ ಅಧಿಕೃತ ಪಟ್ಟಿಯನ್ನು ಜೆಡಿಎಲ್‌ಪಿ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಬಿಡುಗಡೆ ಮಾಡಿದ್ದಾರೆ.
ಕ್ಷೇತ್ರ ಅಭ್ಯರ್ಥಿಗಳು
ಚಿಕ್ಕನಾಯಕನಹಳ್ಳಿ - ಸಿ.ಬಿ.ಸುರೇಶ್‌ಬಾಬು
ಕುಣಿಗಲ್ - ಡಿ.ನಾಗರಾಜಯ್ಯ
ತುರುವೇಕೆರೆ - ಎಂ.ಟಿ.ಕೃಷ್ಣಪ್ಪ
ತುಮಕೂರು ನಗರ - ಎನ್.ಗೋವಿಂದರಾಜು
ತುಮಕೂರು ಗ್ರಾಮಾಂತರ - ಡಿ.ಸಿ.ಗೌರಿಶಂಕರ್
ಕೊರಟಗೆರೆ (ಎಸ್ಸಿ ಮೀಸಲು)- ಪಿ.ಆರ್.ಸುಧಾಕರಲಾಲ್
ಗುಬ್ಬಿ - ನಾಗರಾಜು
ಮಧುಗಿರಿ - ಎಂ.ವಿ.ವೀರಭದ್ರಯ್ಯ
ಪಾವಗಡ (ಎಸ್ಸಿ ಮೀಸಲು) - ಕೆ.ಎಂ.ತಿಮ್ಮರಾಯಪ್ಪ