ಗೃಹ ಸಚಿವರ ತವರಲ್ಲಿಯೇ ಹೆಚ್ಚಾದ ಸಾವು; ಅಪಘಾತದಲ್ಲಿ ಕಳೆದ ವರ್ಷ 773, ಈ ವರ್ಷ 421 ಸಾವು

02web
Published on

ತುಮಕೂರು: ಕಳೆದ 19ತಿಂಗಳಲ್ಲಿ ತುಮಕೂರು ಜಿಲ್ಲೆಯ ಹಲವು ಭಾಗದಲ್ಲಿ 1097 ರಸ್ತೆ ಅಪಘಾತಗಳು ಸಂಭವಿಸಿದ್ದು ಬರೋಬ್ಬರಿ 1194 ಜನರು ಪ್ರಾಣಕಳೆದುಕೊಂಡಿದ್ದಾರೆ.

ಬೆಂಗಳೂರು ಹೊರತಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತವರು ತುಮಕೂರು ಜಿಲ್ಲೆಯಲ್ಲಿಯೇ ಅತೀಹೆಚ್ಚು ಅಪಘಾತ ಹಾಗೂ ಅದರಿಂದ ಸಾವು ಸಂಭವಿಸಿರುವುದು ಪೊಲೀಸರ ತಲೆನೋವು ಹೆಚ್ಚಿಸಿದೆ.

2022 ಜನವರಿ 1ರಿಂದ ಡಿಸೆಂಬರ್ 30ರ ವರೆಗೆ ಬರೋಬ್ಬರಿ 700 ಅಪಘಾತಗಳು ಸಂಭವಿಸಿದ್ದು 773 ಜನರು ಸಾವನ್ನಪ್ಪಿದ್ದಾರೆ. 2023 ಜನವರಿ 1ರಿಂದ ಜುಲೈ 31ರ ವರೆಗೂ ಕಳೆದ ಏಳು ತಿಂಗಳಲ್ಲಿಯೇ 397 ಅಪಘಾತಗಳು ಸಂಭವಿಸಿದ್ದು 421 ಜನರು ರಸ್ತೆಯಲ್ಲಿಯೇ ಪ್ರಾಣಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net