

ತುಮಕೂರು: ಜಿಲ್ಲಾಸ್ಪತ್ರೆಯ ಐಸಿಯು ಕೇಂದ್ರ ವಿಶೇಷ ನವಜಾತ ಶಿಶು ಚಿಕಿತ್ಸಾ ಘಟಕ, ಮೇಜರ್ ಆಪರೇಷನ್ ಥಿಯೇಟರ್, ಹೆರಿಗೆ ವಾರ್ಡ್ಗಳಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ವೈದ್ಯರಿಂದ ಮಾಹಿತಿ ಪಡೆದರು.
ಮಂಗಳವಾರ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಜಿಲ್ಲೆಗೆ ಭೇಟಿ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.
ವಾರ್ಡ್ಗಳಲ್ಲಿ ಮತ್ತು ಆಸತ್ರೆಯ ಒಳಭಾಗ ಮತ್ತು ಹೊರಭಾಗದಲ್ಲಿನ ಶೌಚಾಲಯ ಸ್ವಚ್ಛತೆ. ನೀರಿನ ವ್ಯವಸ್ಥೆ, ಬೆಡ್‌ಗಳ ವ್ಯವಸ್ಥೆ, ರೋಗಿಗಳಿಗೆ ನೀಡಲಾಗುವ ಆಹಾರದ ಗುಣಮಟ್ಟ ಪರಿಶೀಲಿಸಿ ರೋಗಿಗಳ ಅಭಿಪ್ರಾಯ ಪಡೆದರು.
ರೋಗಿಗಳ ಕುಟುಂಬ ಸದಸ್ಯರುಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ವ್ಯವಸ್ಥೆ , ಔಷಧ ಲಭ್ಯತೆ, ಸರಬರಾಜು, ವೈದ್ಯಕೀಯ ಉಪಕರಣಗಳ ನಿರ್ವಹಣೆ ಇತ್ಯಾದಿ ವಿಷಯಗಳು ಕುರಿತು ಪರಿಶೀಲಿಸಿದರು.
ಆಸ್ಪತ್ರೆಯಲ್ಲಿ ನ್ಯೂನತೆಗಳನ್ನು ಕೂಡಲೇ ಸರಿಪಡಿಸಿ ವರದಿ ಮಾಡುವಂತೆ ಹಾಜರಿದ್ದ ಜಿಲ್ಲಾ ಶಸ್ತçಚಿಕಿತ್ಸಕಿ ಡಾ.ವಿಣಾಗೆ ಸೂಚಿಸಿದರು.
ಜಿಲ್ಲಾಸ್ಪತ್ರೆ ಅವರಣದಲ್ಲಿ ನಿರ್ಮಿಸಿಲಾಗಿರುವ ಹೊಸ ಟ್ರಾಮಾ ಸೆಂಟರ್‌ಗೆ ಭೇಟಿ ನೀಡಿ, ಕಾಮಗಾರಿಯು ಪೂರ್ಣಗೊಂಡಿರುವ ಬಗ್ಗೆ ಹಾಗೂ ವೈದ್ಯಕೀಯ ಉಪಕರಣಗಳ ಲಭ್ಯತೆ ಬಗ್ಗೆ ಪರಿಶೀಲಿಸಿದರು.