

ತುಮಕೂರು: ಇದೇ ಮೊದಲಬಾರಿಗೆ ತುಮಕೂರು ಜಿಲ್ಲಾಡಳಿತ ವತಿಯಿಂದ ಆಯೋಜಿಸಿರುವ "ತುಮಕೂರು ದಸರಾ ಉತ್ಸವ -2024' ಗುರುವಾರ ವಿದ್ಯುಕ್ತವಾಗಿ ಆರಂಭಗೊಂಡಿತು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಧಾರ್ಮಿಕ ಮಂಟಪದಲ್ಲಿ ಬೆಳಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹಸಚಿವ ಡಾ. ಜಿ.ಪರಮೇಶ್ವರ್ ಪತ್ನಿ ಕನ್ನಿಕಾಪರಮೇಶ್ವರಿ ಸಮೇತ ಶ್ರೀ ಶೈಲಪುತ್ರಿ ಅಲಂಕೃತ ಚಾಮುಂಡಿ ದೇವಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ದಸರಾ ಆಚರಣೆಗೆ ಚಾಲನೆ ನೀಡಿದರು.
ಸಿದ್ದಗಂಗಾಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನದ ಹನುಮಂತನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೇದಿಕೆಯಲ್ಲಿ ಡೊಳ್ಳು ಬಾರಿಸಿ ದಸರಾ ಸಾಂಸತಿಕ ಉತ್ಸವಕ್ಕೆ ಚಾಲನೆ ನೀಡಿದ ಸಚಿವ ಪರಮೇಶ್ವರ, ತುಮಕೂರು ದಸರಾ ಧಾರ್ಮಿಕ ಆಚರಣೆ, ಸಾಂಸತಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಕ್ರಮವಾಗಿ ಮೂಡಿಬರಲಿದೆ ಎಂದು ಘೋಷಿಸಿದರು.
ನಮ್ಮ ಧಾರ್ಮಿಕ ಆಚರಣೆ, ವಿಚಾರಧಾರೆ, ಭವ್ಯ ಸಂಸತಿಯನ್ನು ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ತುಮಕೂರಿನಲ್ಲಿ ಪ್ರಪ್ರಥಮ ಬಾರಿಗೆ ತುಮಕೂರು ದಸರಾ ಉತ್ಸವ ಆಚರಣೆಯನ್ನು ಪ್ರಾರಂಭಿಸಲಾಗಿದೆಯೇ ಹೊರತು ಮೈಸೂರು ದಸರಾಗೆ ಹೋಲಿಕೆ ಮಾಡಲು ಅಲ್ಲ. ಇದು ಊರಿನ ಉತ್ಸವ, ನಮ್ಮೂರಿನ ಉತ್ಸವ ಆಗಬೇಕು. ನಮ್ಮೂರಿನ ಉತ್ಸವ, ನಮ್ಮೂರ ದಸರಾ ಆಗಲಿ ಎಂಬುದು ನನ್ನ ಆಶಯ ಎಂದರು.
ನಮ್ಮೊಳಗಿನ, ಸಮಾಜದೊಳಗಿನ ದುಷ್ಟ ಶಕ್ತಿ ಸಂಹಾರ: ಚಾಮುಂಡೇಶ್ವರಿ ದುರ್ಗೆ ರೂಪದಲ್ಲಿ ರಾಕ್ಷಸನು ಸಂಹಾರ ಮಾಡಿದ್ದು ಸಮಾಜದಲ್ಲಿನ ದುಷ್ಟ ಶಕ್ತಿಗಳು ಸಂಹಾರ ಆಗಬೇಕೆಂಬುದು ತಾತ್ಪರ್ಯ. ನಮ್ಮೊಳಗಿನ, ಸಮಾಜದೊಳಗಿನ ದುಷ್ಟ ಶಕ್ತಿ ಸಂಹರಿಸಿ, ಶಿಷ್ಟ ಶಕ್ತಿ ಉದಯಿಸುವುದು ದೇವಿಯ ಆರಾಧನೆಯಿಂದ ಸಾಧ್ಯವಾಗಲಿದೆ. ಸತ್ಯ, ಧರ್ಮದಿಂದ ನಡೆದುಕೊಳ್ಳಬೇಕೆಂಬ ಮನಸು ತಾಯಿ ಚಾಮುಂಡೇಶ್ವರ ಸನ್ನಿಧಿಯಲ್ಲಿ ನಿಂತಾಗ ಮೂಡುತ್ತದೆ. ಮೈಸೂರು ಅರಮನೆ, ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಒಂಭು ದಿನಗಳ ಉತ್ಸವವು ಶ್ರೇಷ್ಠತೆಯ ಪ್ರತಿಕವೆನಿಸಿವೆ ಎಂದು ಪರಮೇಶ್ವರ ಹೇಳಿದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆವಹಿಸಿದ್ದರು. ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ತಿಪಟೂರು ಶಾಸಕ ಕೆ.ಷಡಕ್ಷರಿ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಶುಭಕಲ್ಯಾಣ್ , ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಅಂತರಂಗ, ಬಹಿರಂಗ ಶುದ್ಧಿ ದಸರಾ ಹಬ್ಬದ ಮೂಲಕ ಮನಷ್ಯ ಅಂತರಂಗ, ಬಹಿರಂಗ ಶುದ್ಧಿಗೊಳಿಸಿಕೊಳ್ಳಬೇಕಿದೆ. ಇದನ್ನು ಧಾರ್ಮಿಕ, ಸಾಂಸತಿಕ ಹಬ್ಬವಾಗಿ ಆಚರಿಸದೆ ಶೈಕ್ಷಣಿಕವಾಗಿ ಅನುಕೂಲವಾಗಲಿ ಎಂಬುದು ತುಮಕೂರು ದಸಾರ ಆಚರಣೆ ಉದ್ದೇಶವಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು. ಮೈಸೂರಿನಂತೆ ತುಮಕೂರು ನಗರವೂ ಸಹ ಸಾಂಸ್ಕತಿಕ ನಗರವಾಗಿ ರೂಪುಗೊಳ್ಳುತ್ತಿದೆ. ವಿಜಯನಗರ ಅರಸರಿಂದ ಮೈಸೂರು ಅರಸರವರೆಗೆ ದಸರಾ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮಲ್ಲಿರುವ ಕೆಟ್ಟ ಭಾವನೆಯನ್ನು ಹೋಗಲಾಡಿಸಿ ಒಳ್ಳೆಯದ್ದನ್ನು ಅಳವಡಿಸಿಕೊಳ್ಳಬೇಕು ಎಂಬ ಪ್ರತಿಕವೇ ದಸರಾ ಆಚರಣೆ. ತುಮಕೂರಿನ ದಸರಾ ಉತ್ಸವವು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕು. ದಸರಾ ಆಚರಣೆಯಲ್ಲಿ ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿರುವಂತೆ ಉಳಿದ ಕೆಲಸಗಳಲ್ಲಿ ಸಮನ್ವಯತೆ ತೋರಿದ್ದೇ ಆದಲ್ಲಿ ತುಮಕೂರು ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಬಹುದು ಎಂದರು. ಹಿಂದು ಧರ್ಮ ಯಾರೋ ನಾಲ್ವರಿಗೆ ಸೇರಿದ್ದಲ್ಲ ! ಹಿಂದು ಧರ್ಮ ಯಾರೋ ನಾಲ್ವರಿಗೆ ಸೇರಿದ್ದಲ್ಲ. ಅದರ ವಿಚಾರಧಾರೆಗಳು ಪ್ರತಿಯೊಬ್ಬ ಭಾರತೀಯನಿಗು ತಲುಪಬೇಕು. ಧರ್ಮದ ಆಧಾರದ ಮೇಲೆಯೇ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ರಚಿಸಿದ್ದಾರೆ. ನನ್ನ ದೇಶ, ನನ್ನ ಧರ್ಮ ಎಂಬ ಭಾವನೆ ಮೂಡಿಸುವುದು ಅವರ ಆಶಯವಾಗಿತ್ತು. ಸ್ಥಳಿಯ ಸಂಸತಿ, ಧಾರ್ಮಿಕ ವಿಚಾರಧಾರೆಗಳು ಪ್ರತಿಯೊಬ್ಬರಿಗೂ ತಲುಪಬೇಕೆಂಬ ಮಹತ್ವದ ಉದ್ದೇಶದಿಂದಲೇ ತುಮಕೂರು ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು ನಮ್ಮ ಸಂಸತಿ, ಧಾರ್ಮಿಕ ಆಚರಣೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ತುಮಕೂರಿನ ಹಿರಿಯರು ಇದೇ ಮೈದಾನದಲ್ಲಿ ದಸರಾ ಆಚರಣೆ ಮಾಡಿಕೊಂಡುಬಂದಿದ್ದು ಅವರ ಸಲಹೆಗಳನ್ನು ಸಹ ಪಡೆದಿರುವುದಾಗಿ ಸಚಿವ ಪರಮೇಶ್ವರ ಸ್ಪಷ್ಟಪಡಿಸಿದರು. ಹೊಸ ಚರಿತ್ರೆ ಸೃಷ್ಟಿ ಯಾರಿಗೆ ಇಷ್ಟವಿದೆಯೋ ಇಲ್ಲವೋ ಅದನ್ನೆಲ್ಲಾ ಪಕ್ಕಕ್ಕಿಟ್ಟು ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಅದ್ದೂರಿಯಾಗಿ 10 ದಿನಗಳ ಕಾಲ ತುಮಕೂರು ದಸರಾ ಉತ್ಸವ ಆಚರಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಹೊಸ ಚರಿತ್ರೆ ಸೃಷ್ಟಿಗೆ ನಾಂದಿಯಾಡಿದ್ದೇನೆ ಎಂದು ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ಮೈಸೂರು ಮಹಾರಾಜರು ಪ್ರಾರಂಭಿಸಿದ ಮೈಸೂರು ದಸರಾ ಉತ್ಸವವು ವಿಶ್ವ ವಿಖ್ಯಾತ ಹೊಂದಿ ಇತಿಹಾಸದ ಪುಟಗಳಲ್ಲಿ ಸೇರಿದ ರೀತಿಯಲ್ಲಿ ಜಿಲ್ಲೆಯಲ್ಲಿ ಪ್ರಾರಂಭಗೊಂಡಿರುವ ತುಮಕೂರು ದಸರಾ ಆಚರಣೆ ಕೂಡ ಇತಿಹಾಸದ ಪುಟಗಳಲ್ಲಿ ಸೇರಲಿದೆ. ನಾವು, ನೀವು ಸೇರಿದಂತೆ ಪ್ರತಿಯೊಬ್ಬರು ಈ ಇತಿಹಾಸದ ಭಾಗವಾಗಬೇಕಿದೆ. ಸಿಎಂ ಸಿದ್ದರಾಮಯ್ಯ ತುಮಕೂರು ದಸರಾಕ್ಕೆ 1 ಕೋ.ರೂ., ಅನುದಾನ ನೀಡಿದ್ದು ಇನ್ನುಳಿದಂತೆ ಜಿಲ್ಲಾಡಳಿತ ಆರ್ಥಿಕ ಹೊರೆಯನ್ನು ನಿಭಾಯಿಸಲಿದೆ ಎಂದರು.
ದ್ವೇಷ, ಅಸೂಯೆಗಳನ್ನು ತೊರೆದು ಎಲ್ಲರೂ ಒಗ್ಗೂಡಿ ನಾಡಬಹ್ಬ ದಸರಾ ಉತ್ಸವ ಆಚರಿಸಬೇಕು.ಇಡೀ ದೇಶದಲ್ಲೇ 9 ದಿನಗಳ ಕಾಲ ನವರಾತ್ರಿ ಹಬ್ಬ ಆಚರಿಸಲಾಗುತ್ತದೆ. ಮೈಸೂರು ದಸರಾ ಮಾದರಿಯಲ್ಲಿ ತುಮಕೂರಿನಲ್ಲಿಯೂ ದಸರಾ ಉತ್ಸವವನ್ನು ಆರಂಭಿಸಿರುವ ಜಿಲ್ಲಾಡಳಿತ ಕಾರ್ಯ ಶ್ಲಾನೀಯ. ಇದು ನಿರಂತರವಾಗಿ ನಡೆಯಲಿ. ಎಲ್ಲರೂ ವೈಮನ್ಸು ಮರೆತು ಉತ್ಸವದಲ್ಲಿ ಭಾಗಿಯಾಗಲಿ. ಟಿ.ಬಿ.ಜಯಚಂದ್ರ ದೆಹಲಿ ವಿಶೇಷ ಪ್ರತಿನಿಧಿ ನಾವೇ ನಾಲ್ಕು ಜನ ಕೂತು ದಸರಾ ಆಚರಿಸೋದಲ್ಲ. ಜಿಲ್ಲೆಯ ಎಲ್ಲರೂ ಭಾಗವಹಿಸಿ ಉತ್ಸವದಲ್ಲಿ ಸಂಭ್ರಮಿಸಬೇಕು. ನ್ಯಾವರು ಶಾಶ್ವತವಲ್ಲ. ಈ ನಾಡು, ಸಂಸತಿ ಶಾಶ್ವತ. ವೈವಿಧ್ಯ ಸಂಸತಿ, ಪರಂಪರೆಯುಳ್ಳ ಕಲ್ಪತರು ನಾಡಿನಲ್ಲಿ ಜಿಲ್ಲಾಡಳಿತ ಆರಂಭಿಸಿರುವ ದಸರಾ ಉತ್ಸವ ಶಾಶ್ವತವಾಗಿ ನಡೆಯಲಿ. ಕೆ.ಷಡಕ್ಷರಿ ಶಾಸಕ ಕಳೆದ 33 ವರ್ಷದಿಂದಲೂ ತುಮಕೂರು ದಸರಾ ಸಮಿತಿ ಸಂಘಟಕರಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಈ ಬಾರಿ ಸರ್ಕಾರದಿಂದಲೇ ದಸರಾ ಉತ್ಸವ ಆಚರಿಸುತ್ತಿರುವುದು ಸಂತಸದ ವಿಷಯ. ಯಾವುದೇ ವಿವಾದವಿಲ್ಲದೇ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವೈಜ್ಞಾನಿಕ ಮುನ್ನೋಟವನ್ನು ಈ ದಸರಾ ಹೊಂದಿದೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ