

ತುಮಕೂರು: ದಸರಾ ಉತ್ಸವ ಯುವಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಕಿರುತೆರೆ ನಟ ಸುನಿಲ್ ಪುರಾಣಿಕ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತುಮಕೂರು ಜಿಲ್ಲಾ ದಸರಾ ಉತ್ಸವ ಸಮಿತಿ ಆಯೋಜಿಸಿರುವ 33ನೇ ವರ್ಷದ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾಡಿನಲ್ಲಿ ನಡೆಯುವ ಉತ್ಸವಗಳು ನಮ್ಮ ಕಲೆ, ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉತ್ಸವಗಳಾಗಿವೆ ಎಂದರು.
ತುಮಕೂರು ರಂಗಕಲೆಗೆ ಹೇಳಿ ಮಾಡಿಸಿದ ಜಾಗ, ಡಾ.ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣ್ಣಯ್ಯ, ಕೆ.ಹಿರಣ್ಣಯ್ಯ,ಹಾಸ್ಯ ಚರ್ಕವರ್ತಿ ನರಸಿಂಹರಾಜು, ವರನಟ ಡಾ.ರಾಜ್‌ಕುಮಾರ್ ಸೇರಿದಂತೆ ಅನೇಕರಿಗೆ ನಟನೆಯನ್ನು ಕಲಿಸಿಕೊಟ್ಟ ಭೂಮಿ ತುಮಕೂರು ಎಂದರು.
ಜಿಲ್ಲಾಧಿಕಾರಿ ಕೆ.ಶ್ರಿನಿವಾಸ್ ಮಾತನಾಡಿ, ವಿಜಯದಶಮಿ ಅಂದರೆ ವಿಜಯದ ಸಂಕೇತ.ಚಾಮುAಡಿ ಮಹಿಷನ ಕೊಂದ ದಿನ. ಹಾಗೆಯೇ ಶ್ರೀರಾಮ ರಾವಣನನ್ನು ಕೊಂದ ದಿನ. ದೇಶದ ವಿವಿಧೆಡೆ ನಾನಾ ಹೆಸರು ಮತ್ತು ವಿಶಿಷ್ಟತೆಗಳಿಂದ ಆಚರಿಸುವುದನ್ನು ನೋಡಬಹುದು ಎಂದರು.
ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು, ಹರಿಹರದ ಶ್ರೀವಚನಾನಂದ ಸ್ವಾಮೀಜಿ, ಮಾತನಾಡಿ, ದÀಸರಾ ಉತ್ಸವ ಸಮಿತಿಯ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಕಾರ್ಯಾಧ್ಯಕ್ಷ ಡಾ.ಪರಮೇಶ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಗೌರವಾಧ್ಯಕ್ಷ ಎಸ್.ಪಿ.ಚಿದಾನಂದ್, ಕಾರ್ಯದರ್ಶಿ ಮಹೇಶ್, ಖಜಾಂಚಿ ಜಿ.ಎಸ್.ಬಸವರಾಜು, ಸಂಯೋಜಕ ಗೋವಿಂದರಾವ್,ತಹಸೀಲ್ದಾರ್ ಸಿz್ದೆÃಶ್ ಮತ್ತಿತರರು ಇದ್ದರು.
ಸಾವಯವ ಕೃಷಿಕರಾದ ಚಂದ್ರಕಾತ್ ಮತ್ತು ಮಮತ ಅವರುಗಳನ್ನು ಅಭಿನಂದಿಸಲಾಯಿತು.