

ತುಮಕೂರು: ಮೈಸೂರು ದಸರಾ ಉತ್ಸವದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ ಅಕ್ಟೋಬರ್ 3 ರಿಂದ 11ರ ವರೆಗೆ ಮೈಸೂರಿನ ಡಿಸಿ ಹಳೆಯ ಕಚೇರಿ ಬಳಿ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ "ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-&2024' ಏರ್ಪಡಿಸಿದ ಮೇಳದಲ್ಲಿ ಕನ್ನಡ ಪ್ರಕಾಶಕರು, ಮಾರಾಟಗಾರರು ಭಾಗವಹಿಸಬಹುದು. ಮಳಿಗೆಯೊಂದಕ್ಕೆ 1000 ರೂ. ಭದ್ರತಾ ಠೇವಣಿ ಡಿಡಿಯನ್ನು ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. ಇವರ ಹೆಸರಿನಲ್ಲಿ ಸಲ್ಲಿಸಬೇಕು.
ಆಸಕ್ತರು ಕನ್ನಡ ಪುಸ್ತಕ ಪ್ರಾಧಿಕಾರ ಕಚೇರಿ ಅಥವಾ ಆಯಾ ಜಿಲ್ಲೆಯಲ್ಲಿರುವ ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕಚೇರಿ ಅಥವಾ ಪ್ರಾಧಿಕಾರದ ವೆಬ್ಸೈಟ್
https://kpp.karnataka.gov.in ನಿಂದ ಉಚಿತವಾಗಿ ಅರ್ಜಿ ಪಡೆದು ಭರ್ತಿ ಮಾಡಿ ಸೆ.30ರೊಳಗೆ ಸಲ್ಲಿಸುವುದು. ಮಾಹಿತಿಗೆ ದೂ.080- 22484516, 22107704 ಸಂಪರ್ಕಿಸಿ.