

ತುಮಕೂರು: ಬೆಸ್ಕಾಂ ಗ್ರಾಮೀಣ ಉಪವಿಭಾಗ-2ಕ್ಕೆ ಸಂಬಂಧಿಸಿದಂತೆ ಜುಲೈ 19ರಂದು ಮಧ್ಯಾಹ್ನ 3 ರಿಂದ 5.30ಕ್ಕೆ ಗ್ರಾಹಕರ ಸಂವಾದ ಸಭೆ ಏರ್ಪಡಿಸಲಾಗಿದೆ.
ಗ್ರಾಮೀಣ ಉಪವಿಭಾಗ-2ಕ್ಕೆ ಸಂಬಂಧಿಸಿದಂತೆ ಭೀಮಸಂದ್ರ ನಗರ ಹಾಗೂ ಹೆಗ್ಗೆರೆ, ಮಲ್ಲಸಂದ್ರ, ದೊಡ್ಡನಾರವಂಗಲ, ಗೂಳೂರು, ಹೆತ್ತೇನಹಳ್ಳಿ, ಹೊಳಕಲ್, ನಾಗವಲ್ಲಿ, ಕಣಕುಪ್ಪೆ, ಗಂಗೋನಹಳ್ಳಿ, ಅರಿಯೂರು, ಹೆಬ್ಬೂರು ಗಳಿಗೇನಹಳ್ಳಿ, ಬಳ್ಳಗೆರೆ, ನಿಡುವಳಲು, ಸಿರಿವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಹಕರಿಗಾಗಿ ಹೊರಪೇಟೆಯ ಬೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಗ್ರಾಹಕ ಸಂವಾದ ಸಭೆ ನಡೆಯಲಿದ್ದು,
ಸಂಬಂಧಿಸಿದ ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಿ ಕುಂದು, ಕೊರತೆಗಳನ್ನು ಸಲ್ಲಿಸಿ ಪರಿಹರಿಸಿಕೊಳ್ಳಬಹುದು.