

ತುರುವೇಕೆರೆ: ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿನ ಪೊಲೀಸ್ ಸ್ಟೇಷನ್ ಎದುರಿನ ಸಿಟಿ ಎಲೆಕ್ಟ್ರಾನಿಕ್ಸ್ ಮೊಬೈಲ್ ಅಂಗಡಿಯ ಬೀಗಮುರಿದ ಕಳ್ಳರು ಲಕ್ಷಾಂತರ ರೂಪಾಯಿಗಳ ಮೌಲ್ಯದ ಮೊಬೈಲ್ ಮತ್ತು ಟಿವಿಗಳನ್ನು ಕಳವು ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಎಂದಿನಂತೆ ಅಂಗಡಿಯ ಮಾಲೀಕರು ಬಾಗಿಲು ತೆರೆದು ನೋಡಿದಾಗ ಅಂಗಡಿಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನ್ನು ಮನಗಂಡ ಮಾಲೀಕರು ಮೊಬೈಲ್ ಗಳು ಮತ್ತು ಟಿವಿಗಳ ಪರಿಶೀಲಿಸಿದಾಗ ಸುಮಾರು15 ಕ್ಕೂ ಹೆಚ್ಚು ಮೊಬೈಲ್ಗಳು, ಟಿವಿಗಳನ್ನು ಕಳ್ಳರು
ಕಳವು ಮಾಡಿ ಪರಾರಿಯಾಗಿದ್ದಾರೆ.
ಕಳೆದ ಐದಾರು ತಿಂಗಳುಗಳಿಂದ ಪಟ್ಟಣದಲ್ಲಿ ನಿರಂತರ ಕಳ್ಳತನ ನಡೆಯುತ್ತಿದ್ದರೂ ಇಲ್ಲಿಯವರೆಗೆ ಯಾವುದೇ ಆರೋಪಿಗಳನ್ನ ಪೊಲೀಸರು
ಬಂದಿಸದಿರುವುದು ಪಟ್ಟಣಿಗರಲ್ಲಿ ಆತಂಕ ಹೆಚ್ಚಿದೆ.