ಠಾಣೆಯಿಂದ ತಪ್ಪಿಸಿಕೊಂಡು ಪ್ರೇಯಸಿಗಾಗಿ ಮುಂಬೈಗೆ ಹೊರಟಿದ್ದ ಸೈಯದ್ ಅಲಿ ಪೊಲೀಸರ ಬಲೆಗೆ

CRRRRRRRR111
Published on

ತುಮಕೂರು: ಗುಬ್ಬಿ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿ ಸುದ್ದಿಯಾಗಿದ್ದ ಕಳ್ಳತನ ಪ್ರಕರಣದ ಆರೋಪಿ ಸಯ್ಯದ್ ಅಲಿ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಪತ್ತೆಯಾಗಿದ್ದಾನೆ.

ಆರೋಪಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪಿಎಸ್‌ಐ ದೇವಿಕಾ ಸೇರಿ ಐವರು ಪೊಲೀಸರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಅಮಾನತುಗೊಳಿಸಿದ್ದರು.

ಪೊಲೀಸ್ ಠಾಣೆಯಿಂದ ಸಿನಿಮೀಯ ಮಾದರಿಯಲ್ಲಿ ಎಸ್ಕೇಪ್ ಆಗಿದ್ದ 25 ವರ್ಷದ ಸೈಯದ್ ಅಲಿ ತನ್ನ ಪ್ರೇಯಸಿ ಕಾಣಲು ರೈಲಿನಲ್ಲಿ ಬೆಂಗಳೂರಿAದ ಮುಂಬೈಗೆ ತೆರಳುತ್ತಿದ್ದಾಗ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಗುಬ್ಬಿ ಠಾಣೆಯಿಂದ ಪರಾರಿಯಾಗಿದ್ದ ಸೈಯದ್ ಅಲಿ ತನ್ನ ಪ್ರೇಯಸಿಯನ್ನು ಹುಡುಕಿಕೊಂಡು ಬೆಂಗಳೂರಿAದ ಮುಂಬೈ ಕಡೆಗೆ ತೆರಳುವ ವೇಳೆ ಶನಿವಾರ ರಾತ್ರಿ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಗುಬ್ಬಿ ಪೊಲೀಸರು ಬಾಡಿ ವಾರೆಂಟ್ ಮೇರೆಗೆ ಬೆಂಗಳೂರಿAದ ಕರೆತಂದಿದ್ದರು. ಫೆ.2ರ ಬೆಳಗಿನ ಜಾವ ಠಾಣೆಯಿಂದ ಪರಾರಿಯಾಗಿದ್ದ. ಆರೋಪಿ ಸೆರೆಗೆ ಎಸ್‌ಪಿ ಕೆ.ವಿ.ಅಶೋಕ್ ಮೂರು ವಿಶೇಷ ತಂಡ ರಚಿಸಿದ್ದರು.

ತುಮಕೂರಲ್ಲಿ ಕಾರ್ಯನಿರತವಾಗಿದ್ದ ಶಿರಾ ಡಿವೈಎಸ್‌ಪಿ ಬಿ.ಕೆ.ಶೇಖರ್, ಗುಬ್ಬಿ ಸಿಪಿಐ ಗೋಪಿನಾಥ್ ತಂಡ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಆರೋಪಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net