

ತುಮಕೂರು: ಜಿಪಂ ಸಿಇಒ ಜಿ.ಪ್ರಭು ಕೊರಟಗೆರೆ ತಾಲೂಕಿನ ವಿವಿಧ ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿ ಪ್ರಗತಿಯಲ್ಲಿರುವ ಜೆಜೆಎಂ ಕಾಮಗಾರಿ, ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಮನರೇಗಾ ಯೋಜನೆಯಲ್ಲಿ ನಿರ್ಮಾಣಗೊಂಡ ಕಾಮಗಾರಿಗಳನ್ನು ವೀಕ್ಷಿಸಿದರು.
ಮಂಗಳವಾರ ಬೆಳಗ್ಗೆ ತುಂಬಾಡಿ ಗ್ರಾಪಂ ಭೇಟಿ ನೀಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರತೀ ಗ್ರಾಮದ ರೈತರ ಮನವೊಲಿಸಿ ಕನಿಷ್ಟ 500 ವೈಯಕ್ತಿಕ ಕಾಮಗಾರಿಗಳ ಪಟ್ಟಿಯನ್ನು ಮನರೇಗಾ ಕಾಮಗಾರಿಗೆ ನೀಡುವಂತೆ ಗ್ರಾಪಂ ಸದಸ್ಯರಿಗೆ ಮನವಿ ಮಾಡಿದರು.
ಗ್ರಾಪಂ ಬಲಪಡಿಸಲು ಹೆಚ್ಚು ವೈಯಕ್ತಿಕ ಕಾಮಗಾರಿ ಮಾಡಬೇಕು, ಶೇ.60:40ರ ಅನುಪಾತದಂತೆ ಇತರೆ ಸಮುದಾಯ ಕಾಮಗಾರಿ ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳು, ಅಂಗನವಾಡಿ ಕಟ್ಟಡಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಶೌಚಾಲಯಗಳು ಉತ್ತಮವಾಗಿರಬೇಕು ಎಂದರು.
ಕೊರಟಗೆರೆ ತಾಲೂಕು ತುಂಬಾಡಿ ಗ್ರಾಪಂಗೆ ಜಿಪಂ ಸಿಇಒ ಜಿ.ಪ್ರಭು ದಿಢೀರ್ ಭೇಟಿ ನೀಡಿ, ಅಂಗನವಾಡಿಯಲ್ಲಿ ಮೂಲಸೌಕರ್ಯದ ಬಗ್ಗೆ ಮಾಹಿತಿ ಪಡೆದರು