ಇವಿಎಂ ಮತಪೆಟ್ಟಿಗೆಗೆ ಮೂರು ಸುತ್ತಿನ ಕೋಟೆ

11_TMK
Published on

ತುಮಕೂರು: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ವಿಶ್ವವಿದ್ಯಾಲಯ ಕಲಾ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗಳಲ್ಲಿಟ್ಟಿರುವ ಇವಿಎಂ ಮತಪೆಟ್ಟಿಗೆಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ಭದ್ರತಾ ಕೊಠಡಿಗಳ ಸುತ್ತ ಮೊದಲ ಹಂತದಲ್ಲಿ ಶಸ್ತç ಸಜ್ಜಿತ ಕೇಂದ್ರೀಯ ರಕ್ಷಣಾ ಪಡೆಗಳು, ದ್ವಿತೀಯ ಹಂತದಲ್ಲಿ ಶಸ್ತç ಸಜ್ಜಿತ ಪೊಲೀಸ್ ಸಿಬ್ಬಂದಿ ಹಾಗೂ ಮೂರನೇ ಹಂತದಲ್ಲಿ ಜಿಲ್ಲಾಧಿಕಾರಿಗಳಿಂದ ನೇಮಕವಾದ ಕಾರ್ಯನಿರ್ವಾಹಕ ದಂಡಾಧಿಕಾರಿಗಳು 24/7 ಭದ್ರತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭದ್ರತಾ ಕೊಠಡಿಗೆ ಶಸ್ತç ಸಜ್ಜಿತ ಕೇಂದ್ರೀಯ ಭದ್ರತಾ ದಳದ 4 ತುಕಡಿ, ಕೆಎಸ್‌ಆರ್‌ಪಿ 6 ಪ್ಲಾಟೂನ್ ಹಾಗೂ ಇಬ್ಬು ಡಿವೈಎಸ್‌ಪಿ, 6 ಮಂದಿ ಇನ್ಸ್ಪೆಕ್ಟರ್, 16 ಸಬ್ ಇನ್ಸ್ಪೆಕ್ಟರ್, 46 ಸಹಾಯಕ ಸಬ್‌ಇನ್ಸ್ಪೆಕ್ಟರ್, 100 ಮಂದಿ ಪೊಲೀಸರು, 14 ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ 18 ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net