

ತುಮಕೂರು: ಮಹಾನಗರ ಪಾಲಿಕೆಯನ್ನು ಭ್ರಷ್ಟ ಮುಕ್ತಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದ ಆಯುಕ್ತೆ ಬಿ.ವಿ.ಅಶ್ವಿಜರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಿದ್ದ ಅಶ್ವಿಜರನ್ನು ವರ್ಷ ತುಂಬುವುದರಲ್ಲೇ ವರ್ಗಾವಣೆ ಮಾಡಲಾಗಿದೆ.
ಅಶ್ವಿಜ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ಕೆಎಎಸ್ ಅಧಿಕಾರಿ ಡಾ.ಜಗದೀಶ್ ಕೆ.ನಾಯಕ್ರನ್ನು ನೇಮಿಸಿ ಮಂಗಳವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಶ್ವಿಜ ಅವರಿಗೆ ಯಾವುದೇ ಸ್ಥಳವನ್ನು ತೋರಿಸಿಲ್ಲ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಶಿಾರಸಿನಂತೆ ಜಗದೀಶ್ರನ್ನು ಪಾಲಿಕೆಗೆ ವರ್ಗಾಯಿಸಲಾಗಿದೆ ಎನ್ನಲಾಗಿದೆ.
ಜು.25, 2023ರಂದು ಪಾಲಿಕೆ ಆಯುಕ್ತರನ್ನಾಗಿ 2019ನೇ ಬ್ಯಾಚ್ ಐಎಎಸ್ ಅಧಿಕಾರಿ ಬಿ.ವಿ.ಅಶ್ವಿಜರನ್ನು ನೇಮಿಸಿ ಸರ್ಕಾರ ಆದೇಶಿಸಿತ್ತು. ಸ್ೇ ುಟ್ಪಾತ್ ಅಭಿಯಾನಕ್ಕೆ ಚಾಲನೆ ನೀಡಿದ್ದ ಅಶ್ವಿಜ ಅಕ್ರಮವಾಗಿ ುಟ್ಪಾತ್ ಒತ್ತುವರಿದಾರರಿಗೆ ಸಿಂಹಸ್ವಪ್ನರಾಗಿದ್ದರು.
ಅಶ್ವಿಜ ಪತಿ ಕೆ.ವಿ.ಅಶೋಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತಿ, ಪತ್ನಿ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದರು.