

ತುಮಕೂರು: ಕಳೆದ ತಿಂಗಳಲ್ಲಿ 30 ಸಾವಿರ ರೂ. ದಾಟಿ ದಾಖಲೆ ಬರೆದಿದ್ದ ಕ್ವಿಂಟಾಲ್ ಕೊಬ್ಬರಿ ಬೆಲೆ ಸಹಜ ಸ್ಥಿತಿಗೆ ಮರಳುತ್ತಿದೆ. ತಿಪಟೂರು ಮಂಡಿಯಲ್ಲಿ ಗುರುವಾರ ಕನಿಷ್ಟ 24000ರೂ.ಗೆ ಕೊಬ್ಬರಿ ಮಾರಾಟವಾಗುವ ಮೂಲಕ ಒಳಿಕೆಯತ್ತ ಮುಖಮಾಡಿದೆ.
ಕೊಬ್ಬರಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಕೊಬ್ಬರಿ ಉಳಿಸಿಕೊಂಡಿದ್ದ ರೈತರು ಕೊಮಚ ಲಾಭಮಾಡಿಕೊಂಡಿದ್ದಾರೆ, ಆದರೆ, ಬಹುತೇಕ ರೈತರು ಕೊಬ್ಬರಿ ಇಲ್ಲದೆ ಬೆಲೆ ನೋಡಿ ಖುಷಿಪಟ್ಟಿದ್ದರು. ಹಿಂದೆಂದೊ 19 ಸಾವಿರ ರೂ. ದಾಟದ ಕೊಬ್ಬರಿ ದಾಖಲೆಯ 31 ಸಾವಿರ ರೂ.ಗೆ ಮಾರಾಟವಾಗಿ ಮಾಸ ಕಳೆಯುವುದರೊಳಗೆ 5 ರಿಂದ ಆರು ಸಾವಿರ ಕಡಿಮೆಯಾಗಿದೆ.
ಕೊಬ್ಬರಿ ಬೆಲೆ 20 ಸಾವಿರ ರೂ. ದಾಟಿರುವುದು ಅನಿರೀತ ಎಂಬ ಅರಿವು ತೆಂಗು ಬೆಳೆಗಾರರಿಗೂ ಇದ್ದು ಕನಿಷ್ಟ 25 ಸಾವಿರ ರೂ.ಗೆ ಬೆಲೆ ಸ್ಥಿರವಾಗಲಿ ಎಂಬ ಆಸೆಯಿದೆ. ಮಾರುಕಟ್ಟೆಯಲ್ಲಿ ಗರಿಷ್ಟ 26500ರೂ, ಮಾದರಿ 25500ರೂ. ಮಾರಾಟವಾಗುವ ಮೂಲಕ ಇಂದಿಗೂ ತೆಂಗುಬೆಳೆಗಾರರಿಗೆ ಹರ್ಷ ಮೂಡಿಸಿದೆ ಆದರೆ, ಭವಿಷ್ಯದಲ್ಲಿ ಬೆಲೆ ಕಡಿಮೆಯಾದರೆ ಕಷ್ಟ ಎಂಬ ಚಿಂತೆಯೂ ಇದೆ.
ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳದ ರುಚಿ ನೋಡಿರುವ ತೆಂಗು ಬೆಳೆಗಾರರು ಕಳೆದೊಂದು ತಿಂಗಳಲ್ಲಿ ಬೆಲೆ ಕುಸಿತವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಹಾಗಾಗಿ, ಮಾರುಕಟ್ಟೆಯಲ್ಲಿ ಅವಕ ಕೂಡ ಕಡಿಮೆ ಬರುತ್ತಿದೆ. ಗುರುವಾರ 1816 ಕ್ವಿಂಟಾಲ್ ಕೊಬ್ಬರಿ ಮಾತ್ರ ತಿಪಟೂರು ಮಾರುಕಟ್ಟೆಗೆ ಬಂದಿದೆ. ಅವಕ ಕಡಿಮೆಯಾದರೆ ರಾಪೂರೈಕೆಗೆ ಅನುಗುಣವಾಗಿ ಬೆಲೆ ನಿರ್ಧಾರವಾಗಲಿದೆ.
ಇನ್ನೂ ತೆಂಗಿನ ಚಿಪು$್ಪ ಕೂಡ ಟನ್ಗೆ 34000ಗೆ ಮಾರಾಟವಾಗುವ ಮೂಲಕ ರೈತರಿಗೆ ಲಾಭ ತಂದುಕೊಡುತ್ತಿದೆ, ಉತ್ಪಾದನೆ ವೆಚ್ಚವನ್ನೂ ಪಡೆಯಲಾಗದೆ ಕಂಗಾಲಾಗಿ ಶತಮಾನಗಳಿಂದಲೂ ನಷ್ಟದಲ್ಲಿಯೇ ಕೊಬ್ಬರಿ ಮಾರಿರುವ ರೈತ ಈಗ ಕೆಲವು ತಿಂಗಳಿನಿಂದ ಕೊಬ್ಬರಿಯಲ್ಲಿಯೂ ಲಾಭ ಪಡೆಯಬಹುದು ಎಂಬುದನ್ನು ಖಚಿತಪಡಿಸಿಕೊಂಡಿದ್ದಾನೆ.
ತಿಪಟೂರು ಕೊಬ್ಬರಿ ಧಾರಣೆ: ಕನಿಷ್ಟ: 24000 ಗರಿಷ್ಟ: 26500 ಮಾದರಿ: 25500 ಅವಕ: 1816 ಕ್ವಿಂಟಾಲ್