ಜಿಲ್ಲೆಯಲ್ಲಿ ಕೊಬ್ಬರಿ ಖರೀದಿಗೆ ಕೂಡಿಬಂದ ಕಾಲ; ಮಾ.4ರಿಂದ ನೋಂದಣಿ ಆರಂಭ

COOOPRA
Published on

ತುಮಕೂರು: ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಗೆ ಕಾಲ ಕೂಡಿಬಂದಿದ್ದು ಮಾ.4ರಿಂದ ನೋಂದಣಿ ಆರಂಭವಾಗಲಿದೆ.

ಈಗಾಗಲೇ ಜಿಲ್ಲೆಯಲ್ಲಿ 23 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು ಎಲ್ಲಾ ಕೇಂದ್ರಗಳಲ್ಲಿಯೂ ಏಕಕಾಲದಲ್ಲಿಯೇ ನೋಂದಣಿ ಆರಂಭವಾಗಲಿದೆ ಎಂದು ಟಾಸ್ಟ್ ಪೋರ್ಸ್ ಸಮಿತಿ ಅಧ್ಯಕ್ಷರೂ ಆದ, ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದ್ದಾರೆ.

ಒಂದು ಎಕರೆಗೆ ಗರಿಷ್ಠ 6 ಕ್ವಿಂಟಾಲ್‌ನAತೆ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಕೊಬ್ಬರಿ ಖರೀದಿಗೆ ಅವಕಾಶವಿದ್ದು ರಾಜ್ಯ ಕೃಷಿ ಮಾರಾಟ ಮಂಡಳಿ ಅಗತ್ಯ ಸಿದ್ಧತೆಯೊಂದಿಗೆ ಮುಂದಿನ 45ದಿನ ನೋಂದಣಿಗೆ ಅವಕಾಶ ನೀಡಲಾಗಿದೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಹುಳಿಯಾರು, ಗುಬ್ಬಿ, ಕರಡಾಳು, ಕೊನೆಹಳ್ಳಿ, ತಿಪಟೂರು, ಮಾಯಸಂದ್ರ, ತುರುವೇಕೆರೆಯಲ್ಲಿ ತಲಾ 2 ಹಾಗೂ ಚೇಳೂರು, ಕುಣಿಗಲ್, ಶಿರಾ, ಕೆ.ಬಿ. ಕ್ರಾಸ್, ತುಮಕೂರು, ಮುನಿಯೂರು, ದಬ್ಬೆಘಟ್ಟದಲ್ಲಿ ತಲಾ 1ರಂತೆ ಒಟ್ಟು 23 ಖರೀದಿ ಕೇಂದ್ರದಲ್ಲಿ ನೋಂದಣಿ ನಡೆಯಲಿದೆ.

ಮಾ.4ರಿಂದ ಸರ್ಕಾರದ ರಜಾ ದಿನಗಳನ್ನು ಸೇರಿದಂತೆ ಮುಂದಿನ 45 ದಿನಗಳ ವರೆಗೂ ಗರಿಷ್ಟ ಮಿತಿ ಮುಕ್ತಾಯವಾಗುವವೆರಗೂ ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 6 ವರೆಗೂ ನೋಂದಣಿ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಕೊಬ್ಬರಿ ಖರೀದಿಗೆ ದೂರುಗಳಿದ್ದರೆ:

ತಾಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಮಾಹಿತಿ ನೀಡಬಹುದು. ತುಮಕೂರು 9448253277, ಗುಬ್ಬಿ 9535781963, ಶಿರಾ 9844042356, ಕುಣಿಗಲ್ 9342959690, ತಿಪಟೂರು 9845014293, ಚಿಕ್ಕನಾಯಕನಹಳ್ಳಿ 9686056705, ಮಧುಗಿರಿ 9916378199, ತುರುವೇಕೆರೆ 9448416334, ಕೊರಟಗೆರೆ 9448001644 ಹಾಗೂ ಪಾವಗಡ 9448448970 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net