

ತುಮಕೂರು: ರೈತರು ಕೂಡಲೇ ಕೊಬ್ಬರಿಯನ್ನು ಮಾರಾಟ ಮಾಡದೆ 90 ದಿನ ಕಾದರೆ ನಮ್ಮ ಸರ್ಕಾರ ಬರಲಿದ್ದು ಕ್ವಿಂಟಲ್‌ಗೆ 15 ಸಾವಿರ ರೂ. ನೀಡುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರ್‌ಸ್ವಾಮಿ ಭರವಸೆ ನೀಡಿದರು.
ತುರುವೇಕೆರೆಯಲ್ಲಿ ಜೆಡಿಎಸ್ ವತಿಯಿಂದ ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ನಡೆಸುತ್ತಿರುವ ಆಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಬ್ಬರಿ ಬೆಲೆ ಹೆಚ್ಚಳ ಸೇರಿದಂತೆ ರೈತರು ಸಾಲ ಮಾಡದಂತೆ ಬೀಜ, ಗೊಬ್ಬರ ಖರೀದಿಗೆ ಒಂದು ಎಕರಿಗೆ ವರ್ಷಕ್ಕೆ 10 ಸಾವಿರ, 10 ಎಕರೆ ಇದ್ದರೆ 1 ಲಕ್ಷ ರೂ. ಉಚಿತವಾಗಿ ನೀಡುತ್ತೇನೆ ಎಂದು ಘೋಷಿಸಿದರು.