ಅನಿಯಮಿತ ವಿದ್ಯುತ್ ವ್ಯತ್ಯಯ

Power cutt
Published on

ತುಮಕೂರು: ಬೆಸ್ಕಾಂ ನಗರ ಉಪವಿಭಾಗ-2ರ ಜಯನಗರ ಶಾಖಾ ವ್ಯಾಪ್ತಿಯಲ್ಲಿ ಟಿಸಿ ಅಳವಡಿಸುವ ಕಾಮಗಾರಿ ಕೈಗೊಂಡಿರುವುದರಿಂದ ಸೆ.10ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1ರ ವರೆಗೆ ಸಪ್ತಗಿರಿ ಪಶ್ಚಿಮ, ದಕ್ಷಿಣ, ಚನ್ನಪ್ಪನಪಾಳ್ಯ, ದೇವನೂರು ಟಿಪಿಕೆ ರಸ್ತೆ, ನೃಪತುಂಗಾ ಬಡಾವಣೆ, ನಳಂದ ಕಾನ್ವೆಂಟ್ ಸುತ್ತಮುತ್ತ, ಶ್ರೀನಿಧಿ ಬಡಾವಣೆ, ಜಯನಗರ ಪಶ್ಚಿಮ ಹಾಗೂ ದಕ್ಷಿಣ, ಶೆಟ್ಟಿಹಳ್ಳಿ, ಎನ್‌ಸಿ ಲೇಔಟ್, ಚಿದಾನಂದ ಲೇಔಟ್(ರೋಟಿ ಘರ್ ಮುಂಭಾಗ)ನಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಗ್ರಾಹಕರು ಮಾಹಿತಿಗೆ ಮೊ.9449844312, 9449843511 ಸಂಪರ್ಕಿಸಿ.

ವಿದ್ಯುತ್ ವ್ಯತ್ಯಯ: ಬಾರ್ ಲೈನ್​ ರಸ್ತೆಯ ಪೊಲೀಸ್ ಕ್ವಾಟ್ರಸ್ ಪಕ್ಕದಲ್ಲಿರುವ ಮರವನ್ನು ತೆರವುಗೊಳಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಸೆ.10ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಎಂ.ಜಿ.ರಸ್ತೆ 4 ಮತ್ತು 5ನೇ ಕ್ರಾಸ್, ಬಾರ್ ಲೈನ್ ರಸ್ತೆ, ಬಸವಣ್ಣ ದೇವಸ್ಥಾನ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net