ತುಮಕೂರಿನಲ್ಲಿ ನೀರಿಲ್ಲದೆ ನಾಗರೀಕರ ಪರದಾಟ; ಪಾಲಿಕೆ ಮುಂದೆ ಸಿಬ್ಬಂದಿ ಧರಣಿ

PPPPP
Published on

ತುಮಕೂರು: ಸೇವೆ ಖಾಯಂಗೆ ಒತ್ತಾಯಿಸಿ ರಾಜ್ಯ ಮುನಿಸಿಪಲ್ ಕಾರ್ಮಿಕ ಸಂಘ(ಸಿಐಟಿಯು) ನೇತೃತ್ವದಲ್ಲಿ ರಾಜ್ಯದೆಲ್ಲೆಡೆ ಪ್ರತಿಭಟನೆ ಆರಂಭವಾಗಿದ್ದು ಇದರ ಎಫೆಕ್ಟ್ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೂ ತಟ್ಟಿದೆ.

ತುಮಕೂರು ಮಹಾನಗರ ಪಾಲಿಕೆ ಮುಂಭಾಗ ಗುತ್ತಿಗೆ, ಹೋರ ಗುತ್ತಿಗೆ , ಮುನಿಸಿಪಲ್ ಕಾರ್ಮಿಕರು ಸೋಮವಾರದಿಂದ ಪ್ರತಿಭಟನೆ ಆರಂಭಿಸಿದ್ದು ನಗರದಲ್ಲಿ ಕಸ ವಿಲೇವಾರಿ, ಕುಡಿಯುವ ನೀರು ಸೇರಿದಂತೆ ಪೌರಸಮಸ್ಯೆಗಳು ಎದುರಾಗತೊಡಗಿವೆ.

ಪ್ರತಿಭಟನೆಯನ್ನು ಉದ್ದೆಶಿಸಿ ಮಾತನಾಡಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಎಲ್ಲಾ ಖಾಯಂಮೇತರ ಮುನಿಸಿಪಲ್ ಕಾರ್ಮಿಕರು ಕಾನೂನು ಬದ್ದವಾಗಿ ಅರ್ಹರಿದ್ದಾರೆ ಅದರೆ ಸರ್ಕಾರ 18 ವರ್ಷಗಳಿಂದ ಬರಿ ಕನಿಷ್ಟ ವೇತನದಲ್ಲಿ ದುಡಿಸಿ ಅನ್ಯಾಯ ಮಾಡಲಾಗಿದೆ ಎಂದರು.

ನೀರು ಸರಬರಾಜು ನೌಕರರ ಸಮಾನ ವೇತನ ಕಡತ ಕಳೆದ 8 ತಿಂಗಳಿAದ ಧೂಳು ಹಿಡಿಯುತ್ತಿದೆ ಹಾಗಾಗಿ, ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಗೆ ಮುಂದಾಗಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ವಾಹನ ಚಾಲಕ ಘಟಕ , ತುಮಕೂರು ನೀರು ಸರಬರಾಜು ನೌಕರರ ಸಂಘ, ಕಸದ ವಾಹನ ಚಾಲಕರು ಮತ್ತು ಸಹಾಕರು , ಲೋಡರ್. ಕ್ಲಿನರ್.ಗಳ ಸಂಘ, ಜಂಟಿಯಾಗಿ ನೀರು ಮತ್ತು ಸ್ವಚ್ಚತೆಯ ಕೆಲಸ ನಿಲ್ಲಿಸಿ ಮಹಾ ನಗರ ಪಾಲಿಕೆ ಎದರು ಧರಣಿ ಅರಂಭಿಸಿz್ದೆÃವೆ ಎಂದರು.

ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಕುಮಾರ್, ಖಜಾಂಚಿ ಚಂದ್ರಪ್ಪ, ಕಾರ್ಯದರ್ಶಿ ಮಂಜುನಾಥ್ , ಕಸದ ವಾಹನ ಚಾಲಕರು ಸಹಾಕರ ಸಂಘದ ಮಂಜುನಾಥ್, ಅಂಜನಮೂರ್ತಿ,ಶ್ರೀನಿವಾಸ್ ಮೂರ್ತಿ, ಮಾರುತಿ, ವಾಹನ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ನಾಗರಾಜು, ಮಹಮದ್ ಅಜಿಮ್ ಮತ್ತಿತರರು ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net