

ತುರುವೇಕೆರೆ: ತಾಲೂಕಿನ ಕುಣಿಕೆನಹಳ್ಳಿ ಹಾಗೂ ಜಿ.ಮಂಚೇನಹಳ್ಳಿ ಸಮೀಪ ಎರಡು ಹೆಣ್ಣು ಚಿರತೆಗಳ ಮೃತ ದೇಹ ದೊರೆತಿರುವುದು ಆತಂಕ ಹೆಚ್ಚಿಸಿದೆ. ಕಾದಾಡಿಕೊಂಡು ಚಿರತೆಗಳ ಸಾವನ್ನಪ್ಪಿರಬಹುದು ಎಂದು ತಿಳಿಸಲಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಕೆ ಸಿಬ್ಬಂದಿಗಳು ಹಾಗೂ ಪೋಲೀಸರು ಬೇಟಿ ನೀಡಿ ಪರಿಶೀಲಿಸಿ ಚಿರತೆ ಮೃತ ದೇಹಗಳನ್ನು ಮರೋತ್ತರ ಪರೀಕ್ಷೆ ನೆಡೆಸಿ ಮೃತ ದೇಹವನ್ನು ಸ್ಥಳದಲ್ಲಿಯೇ ಸುಟ್ಟು ಹಾಕಲಾಯಿತು.
ಮೃತ ಚಿರತೆಗಳು 6 ರಿಂದ 8 ತಿಂಗಳ ಹೆಣ್ಣು ಚಿರತೆಗಳಾಗಿವೆ. ಚಿರತೆಗಳು ಮರಣ ಹೊಂದಿ ಮೂರು ನಾಲ್ಕು ದಿನಗಳಾಗಿದ್ದರಿಂದ ಮೃತ ದೇಹ ಕಿತ್ತು ಬರಲಿದೆ. ಕೆಲವು ಸಂದರ್ಭದಲ್ಲಿ ಚಿರತೆಗಳು ಚಿರತೆಯನ್ನೇ ಕೊಂದು ತಿನ್ನುವ ಉದಾಹರಣೆಯೂ ಇದೆ.
ತಾಲೂಕಿನ ಶ್ರೀರಾಮಪುರ ಬಳಿಯೂ ಹಗಲಿನಲ್ಲಿಯೂ ಮೇಕೆ ಮೇಯಿಸುತ್ತಿದ್ದ ರೈತ ಮಹಿಳೆ ಮುಂದೆಯೇ ಮೇಕೆಯನ್ನು ಎಳೆದುಕೊಂಡು ಪರಾರಿಯಾಗಿತ್ತು.