

ತುಮಕೂರು: ಅಂಗೈಯಲ್ಲಿಯೇ ಪ್ರಪಂಚ ನೋಡುವಂತಹ ಕಾಲದಲ್ಲಿ ನಾವಿದ್ದೇವೆ. ಇವತ್ತು ಶಿಕ್ಷಣ ಎಂಬುದು ಕೂತಲ್ಲಿಯೇ ತಿಳಿದುಕೊಳ್ಳುವ ವ್ಯವಸ್ಥೆ ಇರುವುದರಿಂದ ವಿದ್ಯಾರ್ಥಿಗಳು ವಿಷಯ ಗ್ರಹಿಸಿಕೊಂಡು ಆಳವಾದ ಅಧ್ಯಯನ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹಿರಿಯ ಚಿತ್ರಕಲಾವಿದ ಪಿ.ಎಸ್.ಗ್ರಾಮ್ ಪುರೋಹಿತ್ ಹೇಳಿದರು.
ನಗರದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು ಹಾಗೂ ಕ್ಯಾಮಲಿನ್ ಕಂಪನಿ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕ್ಯಾಮಲಿನ್ ಉತ್ಪನ್ನಗಳ ಬಳಕೆ ಕುರಿತು ಒಂದು ದಿನದ ಪ್ರಾಯೋಗಿಕ ಕಲಾ ಕರ‍್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಚಿತ್ರಕಲಾ ಕ್ಷೇತ್ರ ಇತರೆ ಕ್ಷೇತ್ರಗಳಿಗಿಂತ ಭಿನ್ನವಾಗಿದೆ. ಈ ಕ್ಷೇತ್ರಕ್ಕೆ ತನ್ನದೇ ಆದ ಮೌಲ್ಯವನ್ನು ತಂದುಕೊಡುವ ಕೆಲಸ ಕಲಾ ವಿದ್ಯರ‍್ಥಿಗಳು ಹಾಗೂ ಕಲಾವಿದರು ಮಾಡಬೇಕು. ವಿದ್ಯರ‍್ಥಿಗಳು ಈ ಕ್ಷೇತ್ರದಲ್ಲಿ ಮುಂದುವರಿಯಲು ಕಾಲೇಜಿಗೆ ಅಗತ್ಯ ಮೂಲಸೌಕರ‍್ಯಗಳನ್ನು ರ‍್ಕಾರಗಳು ಒದಗಿಸಬೇಕು ಎಂದು ಮನವಿ ಮಾಡಿದರು.
ನಿವೃತ್ತ ಶಿಕ್ಷಕ ಎಂ.ಎನ್.ಸುಬ್ರಮಣ್ಯ ಮಾತನಾಡಿ, ಕಲಾ ವಿದ್ಯರ‍್ಥಿಗಳು ಕಲಾಕೃತಿಗಳ ವೀಕ್ಷಣೆಯತ್ತ ಹೆಚ್ಚು ಮುಖಮಾಡಬೇಕು. ಕಲೆಗೆ ಸಂಬಂಧಿಸಿದ ವಿಚಾರಗಳಲ್ಲಿ ಹೆಚ್ಚು ಸಕ್ರಿಯರಾಗಿ ವಿಷಯವನ್ನು ಗ್ರಹಿಸಿಕೊಂಡಾಗ ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.
ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು ಪ್ರಾಚಾರ್ಯ ಸಿ.ಸಿ.ಬಾರಕೇರ ಅವರು, ಹಿರಿಯ ಕಲಾವಿದರ ಕಲಾಕೃತಿಗಳನ್ನು ನೋಡುವುದರ ಜತೆಗೆ ಕಲೆಯ ಕುರಿತು ತಿಳಿದುಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಇಂದು ಕ್ಯಾಮಲಿನ್ ಕಂಪನಿಯವರು ಬಣ್ಣ, ಬ್ರೆಶ್, ಪ್ಯಾಲೇಟ್ ಹಾಗೂ ಕ್ಯಾನ್ವಸ್‌ಗಳನ್ನು ಹೇಗೆ ಬಳಸಬೇಕು ಮತ್ತು ಯಾವುದು ಸೂಕ್ತ ಎಂಬುದು ತಿಳಿಸುವ ಉದ್ದೇಶ ಈ ಕಾರ‍್ಯಗಾರದ್ದು ಆಗಿರುತ್ತದೆ ಎಂದರು.
ನಾವು ಚಿತ್ರಕಲಾ ಶಿಕ್ಷಣ ಕಲಿಯುವ ಹಂತದಲ್ಲಿಯೂ ಕ್ಯಾಮಲಿನ್ ಪರಿಕರಣಗಳನ್ನು ಬಳಸಿಕೊಂಡು ಬಂದಿದ್ದೇವೆ. ಕಲಾವಿರಿಗೆ ಹಾಗೂ ವಿದ್ಯರ‍್ಥಿಗಳಿಗೋಸ್ಕರ ವಿವಿಧ ಆಯಾಮದ ಹೊಸ ಪರಿಕರ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಕ್ಯಾಮಲಿನ್ ಕಂಪನಿಯೊಂದಿಗೆ ನಿರಂತರ ಸಂರ‍್ಕವಿಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.