ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ದಾಖಲಾತಿ

Education
Published on

ತುಮಕೂರು: ಶಿರಾ ತಾಲೂಕು ಚಿಕ್ಕನಹಳ್ಳಿ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ದಾಖಲಾತಿ ಪ್ರಾರಂಭವಾಗಿದ್ದು, ದ್ವಿತೀಯ ಪಿಯು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು.

ಬೆಂಗಳೂರು ವಿಭಾಗದಲ್ಲಿ ಆಂಗ್ಲ ಮಾಧ್ಯಮದಲ್ಲಿ ನಡೆಯುವ ಸಂಸ್ಥೆ ಇದಾಗಿದ್ದು ಅರ್ಜಿ ಸಲ್ಲಿಸುವ ಅವಕಾಶವಿದೆ.

ಶಿಕ್ಷಕರ ತರಬೇತಿಯಲ್ಲದೆ ಈ ಸಂಸ್ಥೆಯಲ್ಲಿ ಗಣಕಯಂತ್ರ ತರಬೇತಿ, ಸ್ಮಾರ್ಟ್ ಕ್ಲಾಸ್ ಬೋಧನೆ, ಶಿಕ್ಷಕರಾಗ ಬಯಸುವವರಿಗೆ ಟಿಇಟಿ ತರಬೇತಿ ನೀಡಲಾಗುವುದು. ನುರಿತ ಅನುಭವವುಳ್ಳ ಉಪನ್ಯಾಸಕರುಗಳಿಂದ ತರಬೇತಿ ಮತ್ತು ಬೋಧನೆ ನೀಡಲಾಗುತ್ತಿದೆ.

ಮಾಹಿತಿಗೆ ಮೊ. 9741069414, 9980870260, 7760783653, 9880331083, 9480250487 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net