ಎನ್.ಹೊಸಹಳ್ಳಿ ತಾಂಡ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ

KKK
Published on

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಹೋಬಳಿ ಎನ್ ಹೊಸಹಳ್ಳಿ ತಾಂಡದ ಬೆಟ್ಟದಲ್ಲಿ ಚಿರತೆಯೊಂದು ಕಳೆದ ಮೂರು ದಿನಗಳಿಂದ ಒಡಾಡುತ್ತಿರುವುದು ಕಾಣಿಸಿಕೊಂಡಿದ್ದು ಗ್ರಾಮದ ನಿವಾಸಿಗಳಲ್ಲಿ ಭಯದ ವಾತಾವರಣ ಉಂಟಾಗಿದೆ.

ಬೆಟ್ಟದ ತಪ್ಪಲಲ್ಲೇ 180ಕ್ಕೂ ಹೆಚ್ಚು ಮನೆಗಳಿದ್ದು, ರಾತ್ರಿ ವೇಳೆ ಊರಿನ ಒಳಗೆ ಬರುವ ಚಿರತೆ ನಾಯಿಗಳನ್ನು ಬೇಟೆಯಾಡುತ್ತಿದೆ, ಇದರಿಂದ ಸಂಜೆಯಾದರೆ ಸಾಕು ಮನೆಯಿಂದ ಆಚೆ ಬರಲು ಭಯದವಾತಾವರಣ ಗ್ರಾಮದಲ್ಲಿ ನಿರ್ಮಾಣವಾಗಿದೆ.

ಅರಣ್ಯ ಅಧಿಕಾರಿಗಳು ಶೀಘ್ರವೇ ಚಿರತೆ ಬಂಧಿಸುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net