ಕೇಂದ್ರ ಬರ ಅಧ್ಯಯನ ತಂಡ ಅಕ್ಟೋಬರ್ 6ರಂದು ಜಿಲ್ಲೆಗೆ ಭೇಟಿ

drought
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಮಳೆ ಕೊರತೆಯಿಂದ ಒಣಗಿದ ಬೆಳೆ.
Published on

ತುಮಕುರು: ಜಿಲ್ಲೆಯ 10 ತಾಲೂಕುಗಳು ಬರಪೀಡಿತವಾಗಿದ್ದು ನಷ್ಟದ ಅಧ್ಯಯನಕ್ಕಾಗಿ ಕೇಂದ್ರ ಬರ ಅಧ್ಯಯನ ತಂಡ ಅಕ್ಟೋಬರ್ 6ರಂದು ಜಿಲ್ಲೆಗೆ ಆಗಮಿಸಲಿದೆ.

ಕೇಂದ್ರದಿಂದ ಆಗಮಿಸಿರುವ ಅಧಿಕಾರಿಗಳು ಮೂರು ತಂಡಗಳಾಗಿ ವಿಂಗಡಿಸಿಕೊಂಡಿದ್ದು ಮೂರನೇ ತಂಡ ಅ.6ರಂದು ಚಿಕ್ಕಬಳ್ಳಾಪುರ , ತುಮಕೂರು ಜಿಲ್ಲೆಗಳ ಪ್ರವಾಸ ನಡೆಸಿ ಚಿತ್ರದುರ್ಗದಲ್ಲಿ ವಾಸ್ತವ್ಯ ಮಾಡಲಿದೆ.

ಕೇಂದ್ರ ತಂಡ ಹತ್ತು ಸದಸ್ಯರ ಮೂರು ತಂಡ ಅ.5ರಿಂದ ನಾಲ್ಕು ದಿನಗಳ ಕಾಲ ವಿವಿಧ ಜಿಲ್ಲಾ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಲಿವೆ. ರಾಜ್ಯದ ಸ್ಥಳೀಯ ಅಧಿಕಾರಿಗಳೊಂದಿಗೆ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ.

ತುಮಕೂರಿಗೆ ಆಗಮಿಸಲಿರುವ ಮೂರನೇ ತಂಡದಲ್ಲಿ ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಅಶೋಕ್‌ಕುಮಾರ್ ನೇತೃತ್ವದ ತಂಡದಲ್ಲಿ ಎಂಎನ್‌ಸಿಎಫ್‌ಸಿಯು ಉಪನಿರ್ದೇಶಕ ಕರಣ್‌ ಚೌಧರಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ಕಾರ್ಯದರ್ಶಿ ಸಂಗೀತ್‌ಕುಮಾರ್ ಹಾಗೂ ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ.ಶ್ರೀನಿವಾಸರೆಡ್ಡಿ ಸಾಥ್ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net