

ತುಮಕೂರು: ಪಕ್ಷ ತೊರೆದಿರುವ ಎಸ್.ಆರ್.ಶ್ರೀನಿವಾಸ್ ಹಾಗೂ ಡಿ.ಸಿ.ಗೌರಿಶಂಕರ್ ಅವರಂತಹ ನಾಯಕರನ್ನು ಹುಟ್ಟುಹಾಕುವ ಶಕ್ತಿ ಜೆಡಿಎಸ್ ಕಾರ್ಯಕರ್ತರಿಗಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಸಿ.ಬಿ.ಸುರೇಶ್‌ಬಾಬು ಸವಾಲೆಸೆದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ, ಮಾಜಿ ಶಾಸಕರೂ ಪಕ್ಷ ತೊರೆದರೂ ಜೆಡಿಎಸ್ ಶಕ್ತಿ ಜಿಲ್ಲೆಯಲ್ಲಿ ಕಡಿಮೆ ಆಗಿಲ್ಲ, ಲೋಕಸಭೆ ಚುನಾವಣೆಯಲ್ಲಿಯೂ ಗೆಲ್ಲುವ ಸಾಮರ್ಥ್ಯವಿದೆ ಎಂದರು.
ಮೈತ್ರಿ ಪಕ್ಷ ಬಿಜೆಪಿ ಜೆ.ಸಿ.ಮಾಧುಸ್ವಾಮಿ ಅವರಿಗೆ ಟಿಕೆಟ್ ಕೊಟ್ಟರೂ ನಾನು ಅವರ ಪರವಾಗಿಯೇ ಕೆಲಸ ಮಾಡುತ್ತೇನೆ, ಇದರಲ್ಲಿ ಯಾವುದೇ ಅನುಮಾನ ಬೇಡ. ಜೆಡಿಎಸ್‌ಗೆ ಸೀಟು ಬಿಟ್ಟುಕೊಟ್ಟರೆ ಮಾಧುಸ್ವಾಮಿ ಕೂಡ ನಮ್ಮ ಪರವಾಗಿ ಕೆಲಸ ಮಾಡಲಿದ್ದಾರೆ ಎಂದರು.