ಎಲೆಕ್ಟ್ರಿಕ್ ಶೋರೂಮ್ ನಲ್ಲಿ ಬೆಂಕಿ ಎರಡು ಬೈಕ್ ಭಸ್ಮ

3333
Published on

ತುರುವೇಕೆರೆ: ಪಟ್ಟಣದ ತಿಪಟೂರು ರಸ್ತೆಯಲ್ಲಿನ ಜೆಮೊಪೈ ಎಲೆಕ್ಟ್ರಿಕ್ ದ್ವಿಚಕ್ರವಾಹನದ ಶೋರೂಮ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಎರಡು ಬೈಕ್ ಗಳು ಸುಟ್ಟಿ ಹೋಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ತಾಲ್ಲೂಕಿನ ಅರಳೀಕೆರೆ ಗ್ರಾಮದ ಶಿವನಂಜಪ್ಪ ಅವರ ಮಗ ಎ.ಎಸ್.ಮೋಹನ್ ಎಂಬುವರಿಗೆ ಸೇರಿದ ಜೆಮೊಪೈ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಶೋರೂಮ್ ನಲ್ಲಿ ಸೋಮವಾರ ರಾತ್ರಿ ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕೀಟ್ ಉಂಟಾಗಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಅಕ್ಕಪಕ್ಕದ ಅಂಗಡಿಯವರು ಅಗ್ನಿಶಾಮಕ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿ ಶಾಮಕ ಠಾಣಾ ಸಿಬ್ಬಂದಿಗಳು ಶೋರೂಮ್ ನ ಶಟರ್ ತೆರೆದು ಬೆಂಕಿ ನಂದಿಸಿದ್ದಾರೆ. ಅಷ್ಟರೊಳಗೆ ಅಂಗಡಿಯಲ್ಲಿದ್ದ 18 ದ್ವಿಚಕ್ರ ವಾಹನಗಳ ಪೈಕಿ ಎರಡು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬ್ಯಾಟರಿ, ಅಂಗಡಿ ಶಟರ್ ಗ್ಲಾಸ್ ಒಡೆದು ಹೋಗಿವೆ. ಕಂಪ್ಯೂಟರ್ ಹಾನಿಗೊಳಗಾಗಿದೆ. ಬೆಂಕಿಯ ರಭಸಕ್ಕೆ ಎಲ್ಲ ದ್ವಿಚಕ್ರ ವಾಹನಗಳ ಪ್ಲಾಸಿಕ್ ವಸ್ತುಗಳು ಸುಟ್ಟಿವೆ.

ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿ ಶಾಮಕ ಠಾಣಾ ಸಿಬ್ಬಂದಿಗಳಾದ ನವೀನ್ ಕುಮಾರ್, ಶಿವಕುಮಾರ್, ರಾಹುಲ್, ಸುನಿಲ್ ಹಿರೇಮಠ್, ತೌಸಿಫ್ ಭಾಗವಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net