

ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಜೂ.25 ರಂದು ತುಮಕೂರು ಜಿಲ್ಲಾ ಬಂದ್ಗೆ ಹೇಮಾವತಿ ನೀರಾವರಿ ಹೋರಾಟ ಸಮಿತಿ ಕರೆ ನೀಡಿದೆ. ಹೋಟೆಲ್ ಅಸೋಸಿಯೇಷನ್, ಬೀದಿಬದಿ ವ್ಯಾಪಾರಿಗಳ ಸಂ, ಧಾನ್ಯ ವರ್ತಕರ ಸಂ, ಆಟೋ, ಟ್ಯಾಕ್ಸಿ ವಾಹನ ಚಾಲಕರ ಸಂ ಸೇರಿದಂತೆ ವಿವಿಧ ರೈತ ಹಾಗೂ ಕನ್ನಡ ಪರ ಸಂಟನೆಗಳು ಸ್ವಯಂ ಘೋಷಿತ ಬಂದ್ ಮೂಲಕ ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿಸಿವೆ.
ಶ್ರೀರಂಗ ಕುಡಿಯುವ ನೀರಿನ ಏತ ನೀರಾವರಿ ಯೋಜನೆಗೆ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಮೂಲಕ ಹೇಮೆ ನೀರು ಹರಿಸುವ ಯೋಜನೆ ವಿರುದ್ಧ ಜಿಲ್ಲೆಯಾದ್ಯಂತ ಹೋರಾಟ ರೂಪಿಸಿ ತಡೆಯೊಡ್ಡಿದ್ದರೂ ಬೇರೆ ಬೇರೆ ರೀತಿಯಲ್ಲಿ ಪೈಪ್ಲೈನ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದು ನಮ್ಮನ್ನು ಮತ್ತಷ್ಟು ಕೆರಳಿಸಿದೆ. ಹಾಗಾಗಿ, ಈ ಯೋಜನೆ ರದ್ದು ಪಡಿಸುವಂತೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು ಸ್ವಯಂ ಘೋಷಿತವಾಗಿ ತುಮಕೂರು ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ. ಶಾಂತಿಯುತ ಬಂದ್ಗೆ ಏನಾದರೂ ಅಡ್ಡಿಪಡಿಸಿದರೆ ಮುಂದಾಗುವ ಪರಿಣಾಮಕ್ಕೆ ಸರ್ಕಾರವನೇ ಹೊಣೆಯಾಗಲಿದೆ ಎಂದು ಹೇಮಾವತಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸೊಗಡುಶಿವಣ್ಣ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ನಾಗರಿಕರು ರೈತ ಪರ, ಕನ್ನಡಪರ, ಮಹಿಳಾ ಸಂಘಟನೆಗಳು, ಆಟೋ ಚಾಲಕರ ಸಂಘದವರು, ಅಮಾಲಿ ಸಂಘದವರು, ಗುತ್ತಿಗೆದಾರರ ಸಂಘ, ಅಂಗಡಿ ಮಾಲೀಕರ ಸಂಘ, ಲಾರಿ ಚಾಲಕರ ಸಂಘ, ಅಕ್ಕಿ ಗಿರಣಿಯ ಮಾಲೀಕರ ಸಂಘ, ಶಾಲಾ ಕಾಲೇಜುಗಳ ಮುಖ್ಯಸ್ಥರು ಒಟ್ಟಾರೆ ಪಕ್ಷಾತಿತವಾಗಿ ಜಾತ್ಯತಿತವಾಗಿ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಶಾಂತಿಯುತ ಬಂದ್ನಲ್ಲಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಬೆಳಗುಂಬ ಪ್ರಭಾಕರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಹೋಟೆಲ್ ಅಸೋಸಿಯೇಷನ್ನ ವಾಸುದೇವಶೆಟ್ಟಿ, ಟ.ಜಿ.ವೇದಮೂರ್ತಿ, ಗುರುಪ್ರಕಾಶ್ ಬಳ್ಳುಕರಾಯ, ಕೆ.ಪಿ.ಮಹೇಶ್, ಎಸ್. ರಾಮಚಂದ್ರರಾವ್, ರಾ.ವೀರೇಶ್ಪ್ರಸಾದ್, ಜಿ. ದೇವರಾಜು, ಭದ್ರೇಗೌಡ, ಕೆ.ವಿ.ಬೆಟ್ಟಯ್ಯ, ಬಸವರಾಜು, ಜುಬೇರ ಷಫಿ, ರಾಜಣ್ಣ, ಎನ್. ಅರುಣ್ಕುಮಾರ್, ಷಬ್ಬೀರ್ಅಹಮದ್, ಸೋಮಶೇಖರ್, ಚಂದ್ರರ್ಕಿತಿ, ತರಕಾರಿ ಮಹೇಶ್, ಕಾಫೀಪುಡಿ ರಾಜಣ್ಣ, ಬಡ್ಡಿಹಳ್ಳಿ ಚಂದ್ರು, ಗೋಕುಲ್ ಮಂಜುನಾಥ್, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀರಂಗ ಏತ ನೀರಾವರಿ ಯೋಜನೆಗೆ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಗೆ ಅನುವು ಮಾಡಿಕೊಡುವುದಿಲ್ಲ ಎಂದು ಹೋರಾಟ ನಡೆಸಲಾಗಿದೆ. ಆದರೂ, ವಿದ್ಯುತ್ ಪರಿವರ್ತಕಗಳು ಹಾಗೂ ಕಂಬಗಳನ್ನು ರೈತರ ಹೊಲ, ತೋಟಗಳಿಗೆ ಸ್ಥಳಾಂತರಿಸಲು ಬೆಸ್ಕಾಂ ಇಲಾಖೆ ಆದೇಶ ಹೊರಡಿಸಿದೆ. ರೈತರ ಮೇಲೆ ಪದೇ ಪದೇ ಇಂತಹ ದೌರ್ಜನ್ಯ ನಡೆಸುತ್ತಿರುವುದನ್ನು ಯಾವುದೇ ಕಾರಣಕ್ಕು ಸಹಿಸುವುದಿಲ್ಲ. ಸೊಗಡುಶಿವಣ್ಣ ಮಾಜಿ ಸಚಿವ ತುಮಕೂರು ಶಾಖೆ ನಾಲೆಯನ್ನು ಯೋಜನೆ ಕೊನೆಭಾಗವದವರೆಗೆ ಆಧುನೀಕರಣ ಮಾಡಲಾಗಿದೆ. ನೈಸರ್ಗಿಕವಾಗಿ ನೀರುತೆಗೆದುಕೊಂದು ಹೋಗಲಿಕ್ಕೆ ನಮ್ಮ ವಿರೋಧ ಇಲ್ಲ. ಜಿಲ್ಲೆಯ ಪ್ರಭಾವಿ ಸಚಿವರಾದ ಪರಮೇಶ್ವರ್, ಕೆ.ಎನ್.ರಾಜಣ್ಣ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸಹ ಈಗ ಲಿಂಕ್ ಕೆನಾಲ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಯೋಜನೆ ಕೈಬಿಡಬೇಕೆಂಬ ನಮ್ಮ ಹೋರಾಟ ಭಾಗವಾಗಿ ಜಿಲ್ಲಾ ಬಂದ್ ನಡೆಸಲಿದ್ದೇವೆ. ಎಚ್.ನಿಂಗಪ್ಪ ಮಾಜಿ ಶಾಸಕ ಜಿಲ್ಲಾ ಬಂದ್ ವೇಳೆ ತುರ್ತು ಸೇವೆಗೆ ಮಾತ್ರ ಅವಕಾಶ ಇರಲಿದೆ. ಆಸ್ಪತ್ರೆ, ಮೆಡಿಕಲ್ ಶಾಪ್, ಆ್ಯಂಬುಲೆನ್ಸ್ ಗಳ ಸಂಚಾರಕ್ಕೆ ಮಾತ್ರ ಅವಕಾಶ ಕೊಡಲಾಗುತ್ತದೆ. ಸರ್ಕಾರ ಬಲವಂತವಾಗಿ ಬಂದ್ ಹತ್ತಿಕ್ಕುವ ಕೆಲಸ ಮಾಡಿ ಸಾರಿಗೆ ನಿಗಮದ ಬಸ್ಸುಗಳನ್ನು ಓಡಿಸಿದ್ದೇ ಆದಲ್ಲಿ ಮುಂದೆ ಆಗುವಂತ ಅನಾಹುತಕ್ಕೆ ನಾವು ಜವಾಬ್ದಾರರಲ್ಲ. ಎಸ್.ಡಿ.ದಿಲೀಪ್ ಕುಮಾರ್ ಬಿಜೆಪಿ ಮುಖಂಡ