ಮುನಿಸು ಮರೆತು ಬಿಎಸ್‌ವೈ ಭೇಟಿಯಾದ ವಿ.ಸೋಮಣ್ಣ!

Somanna1111
Published on

ತುಮಕೂರು: ತುಮಕೂರು ಕ್ಷೇತ್ರದ ಲೋಕಸಭೆ ಟಿಕೆಟ್‌ಗೆ ಬೇಡಿಕೆ ಇಟ್ಟಿರುವ ಮಾಜಿ ಸಚಿವ ವಿ.ಸೋಮಣ್ಣ ನಿರೀಕ್ಷೆಯಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.

ಭೇಟಿ ಸಂದರ್ಭದಲ್ಲಿ ಸಂಸದ ಜಿ.ಎಸ್.ಬಸವರಾಜು ಕೂಡ ಹಾಜರಿದ್ದು ಸೋಮಣ್ಣ ಅವರಿಗೆ ಟಿಕೆಟ್ ಕೊಡಬೇಕು ಎಂದು ಬಿಎಸ್‌ವೈ ಬಳಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಭೇಟಿ ಸಂಸದರ್ಭದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ಸೋಮಣ್ಣ ಪುತ್ರ ಡಾ.ಅರುಣ್ ಕೂಡ ಹಾಜರಿದ್ದು ನಾಯಕರ ನಡುವೆ ಸಂಧಾನ ನಡೆಸಿದ್ದು ಇದರ ಪ್ರತಿಫಲ ಭವಿಷ್ಯದ ದಿನಗಳಲ್ಲಿ ತಿಳಿದುಬರಲಿದೆ.

ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿ.ಸೋಮಣ್ಣ, ಜಿ.ಎಸ್.ಬಸವರಾಜು ಅವರು ಸ್ಫರ್ಧೆ ಮಾಡುವುದಿಲ್ಲ ಎಂದು ಹೇಳಿರುವುದರಿಂದ ತುಮಕೂರು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ ಎಂದು ಪುನರುಚ್ಚರಿಸಿದರು.

ಭೇಟಿ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಜತೆ ಸಾಕಷ್ಟು ಮಾತನಾಡಿದ್ದು ಅವರ ಇತಿಮಿತಿಯಲ್ಲಿ ಅವರು ಮಾಡುತ್ತಾರೆ ಆದರೆ, ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net