ಪಡಿತರ ಚೀಟಿದಾರರು ಇಕೆವೈಸಿ ಮಾಡಿಸಿ

BPL
Published on

ತುಮಕೂರು: ಕುಣಿಗಲ್​ ತಾಲ್ಲೂಕು ವ್ಯಾಪ್ತಿಯಲ್ಲಿರುವ ಪಡಿತರ ಚೀಟಿದಾರರು ಏಪ್ರಿಲ್​ 30ರೊಳಗಾಗಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ಎಂದು ಕುಣಿಗಲ್​ ತಹಸೀಲ್ದಾರ್​ ಯು.ರಶ್ಮಿ ಮನವಿ ಮಾಡಿದ್ದಾರೆ.

ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ತಪ್ಪದೇ ಇ-ಕೆವೈಸಿ ಮಾಡಿಸಬೇಕು. ಕುಣಿಗಲ್​ ತಾಲೂಕಿನ 2920 ಸದಸ್ಯರು ಇ-ಕೆವೈಸಿ ಮಾಡಿಸಿರುವುದಿಲ್ಲ. ಈವರೆಗೂ ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿಯಲ್ಲಿರುವ ಸದಸ್ಯರು ಏಪ್ರಿಲ್​ ಅಂತ್ಯದೊಳಗಾಗಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಬೇಕು. ಇ-ಕೆವೈಸಿ ಮಾಡಿಸದ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ಕೈಬಿಡಲಾಗುತ್ತಿದೆ.

ಪಡಿತರ ಚೀಟಿಗಳಲ್ಲಿ ಮೃತ ಸದಸ್ಯರ ಹೆಸರುಗಳನ್ನು ಡಿಲೀಟ್​ ಮಾಡಿಸದೇ ಇದ್ದಲ್ಲಿ ಮೃತರ ಮರಣ ಪ್ರಮಾಣ ಪತ್ರದೊಂದಿಗೆ ಕುಣಿಗಲ್​ ತಾಲೂಕು ಕಚೇರಿಗೆ ಭೇಟಿ ನೀಡಿ ಮೃತ ಸದಸ್ಯರ ಹೆಸರು ತೆಗೆಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net